ಅಭಿಪ್ರಾಯ / ಸಲಹೆಗಳು

ಪೊಲೀಸ್ ಪಬ್ಲಿಕ್‌ ಶಾಲೆ

ಪೊಲೀಸ್‌ ಪಬ್ಲಿಕ್‌ ಶಾಲೆ:

ಪೋಲಿಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಮೀಸಲು ಪಡೆಯು ವಿವಿದೋದ್ದೇಶ ಸಂಘವು  ಪೊಲೀಸ್‌ ಪಬ್ಲಿಕ್‌ ಶಾಲೆಯನ್ನು ನಡೆಸುತ್ತಿದೆ. ಈ ಶಾಲೆಯು ಸಿಬಿಎಸ್‌ಸಿ ನವ ದೆಹಲಿ ರವರಿಂದ ಮಾನ್ಯತೆ ಪಡೆದಿರುತ್ತದೆ.  ಈ ಶಾಲೆಯಲ್ಲಿ ದೇಶದಾದ್ಯಂತ ಕಲಿಸಲಾಗುವ ಸಿಬಿಎಸ್‌ಸಿ ಪಠ್ಯ ಕ್ರಮವನ್ನು ಅನುಸರಿಸುತ್ತದೆ.

ಪೊಲೀಸ್‌ ಇಲಾಖೆಯ ಕೆಳ ಹಂತದ ಸಿಬ್ಬಂದಿ ವರ್ಗದವರ ಮಕ್ಕಳಿಗೆ ಆದ್ಯತೆ ನೀಡಲಾಗಿದೆ.

ಈ ಶಾಲೆಗೆ ದಾಖಲಾಗಲು ಅರ್ಹತೆ ಪಡೆಯಲು ಪ್ರವೇಶ ಪರೀಕ್ಷೆಗಳನ್ನು ಬರೆಯುವುದು ಖಡ್ಡಾಯವಾಗಿರುತ್ತದೆ. ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಬೆಳೆಸುವ ಉದ್ದೇಶದಿಂದ 2009-10 ನೇ ಸಾಲಿನಿಂದ ಈ ಶಾಲೆಗಳಲ್ಲಿ ಪ್ರತಿ ಶತ 30% ರಷ್ಟು ಸಾರ್ವಜನಿಕರ ಮಕ್ಕಳಿಗೆ ದಾಖಲಿಸಲು  ಅನುವು ಮಾಡಿಕೊಡಲಾಯಿತು. ಅತ್ಯುತ್ತಮ ಶೈಕ್ಷಣಿಕ ವಾತಾವರಣದಲ್ಲಿ ಬೆಳೆಯಲು ಅವಕಾಶವನ್ನು ಒದಗಿಸುವ ಮೂಲಕ ಶಾಲೆಯು ಪೊಲೀಸ್‌ ಮಕ್ಕಳ ಕಲ್ಯಾಣ ಕಾರ್ಯಕ್ಕಾಗಿ ತನ್ನನ್ನು ಅರ್ಪಿಸಿಕೊಂಡಿದೆ.

ಪೊಲೀಸ್‌ ಪಬ್ಲಿಕ್‌ ಶಾಲೆಗಳ ವಿವರ ಈ ಕೆಳಕಂಡಂತೆ ಇರುತ್ತದೆ.

1. ಶ್ರೀ ಎನ್.ಎ.ಮುತ್ತಣ್ಣ ಸ್ಮಾರಕ ವಸತಿ ಶಾಲೆ ಧಾರವಾಡ

        a) 1997 ರಲ್ಲಿ ಈ ಶಾಲೆ ಪ್ರಾರಂಭವಾಯಿತು.

        b) 6 ರಿಂದ 10 ನೇ ತರಗತಿಯವರೆಗೆ ಸಿಬಿಎಸ್‌ಇ ಪಠ್ಯಕ್ರಮ

2. ಪೊಲೀಸ್‌ ಪಬ್ಲಿಕ್‌ ಶಾಲೆ ಮೈಸೂರು

        a) ಈ ಶಾಲೆ 2008 ನೇ ಸಾಲಿನಲ್ಲಿ ಪ್ರಾರಂಭವಾಯಿತು

        b) ಸಿಬಿಎಸ್‌ಇ ಮಾದರಿ ಶಾಲೆ. 1ನೇ ತರಗತಿ ಯಿಂದ 10ನೇ ತರಗತಿಯವರೆಗೆ ಸಿಬಿಎಸ್‌ಇ ಪಠ್ಯಕ್ರಮ.

3. ಪೊಲೀಸ್‌ ಪಬ್ಲಿಕ್‌ ಶಾಲೆ ಕೋರಮಂಗಲ 

        a) ಈ ಶಾಲೆ 2007 ನೇ ಸಾಲಿನಲ್ಲಿ ಪ್ರಾರಂಭವಾಯಿತು.

        b) ಎನ್‌ಸಿಈಆರ್‌ಟಿ/ಸಿಬಿಎಸ್‌ಇ ಪಠ್ಯ ಕ್ರಮವನ್ನು ಎಲ್‌ಕೆಜಿಯಿಂದ 10ನೇ ತರಗತಿಯವರೆಗೆ  ಅನುಸರಿಸುತ್ತದೆ.

4. ಪೊಲೀಸ್‌ ಪಬ್ಲಿಕ್‌ ಶಾಲೆ ದಾವಣಗೆರೆ

        a) ಈ ಶಾಲೆ 2022-23 ನೇ ಸಾಲಿನಲ್ಲಿ ಪ್ರಾರಂಭವಾಯಿತು.

        b) ಎನ್‌ಸಿಈಆರ್‌ಟಿ ಪಠ್ಯ ಕ್ರಮವನ್ನು 1ನೇ ತರಗತಿಯಿಂದ 6ನೇ ತರಗತಿಯವರೆಗೆ  ಅನುಸರಿಸುತ್ತದೆ.

5. ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಹೆಚ್‌ಡಿ 83 ಪಿಬಿಎಲ್‌ 2013 ರಲ್ಲಿ, ಉಡುಪಿ(ಪಶ್ಚಿಮ ವಲಯ), ಕಲ್ಬುರ್ಗಿ(ಈಶಾನ್ಯ ವಲಯ), ಬೆಳಗಾವಿ(ಉತ್ತರ ವಲಯ) ಪ್ರಾರಂಭಿಸಲು ಅನುಮತಿ ನೀಡಲಾಯಿತು.

ಇತ್ತೀಚಿನ ನವೀಕರಣ​ : 24-02-2022 01:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080