ಅಭಿಪ್ರಾಯ / ಸಲಹೆಗಳು

ಉತ್ತಮ ಚಾಲನೆ ಸಲಹೆಗಳು

ಒಳ್ಳೆಯ ಚಾಲನೆ ಬಗ್ಗೆ ಸಲಹೆಗಳು: 

ಒಳ್ಳೆಯ ಚಾಲಕನ ನಡೆಗಳು:

ಅ) ಒಬ್ಬ ಉತ್ತಮ ಚಾಲಕ ಯಾವಾಗಲೂ ಪಾದಚಾರಿಗಳು, ಸೈಕಲ್ ಸವಾರರು ಮತ್ತು ಇತರೆ ಚಾಲಕರ ಬಗ್ಗೆ ಉದಾರನಾಗಿರುತ್ತಾನೆ. ಭಯಗೊಳ್ಳುವಂತಹ ವೇಗದಲ್ಲಿ ಅವರನ್ನು ಸಮೀಪಿಸಿ ಅವರು ಹೆದರುವಂತೆ ಮಾಡುವುದಿಲ್ಲ. ಹಾರನ್ ಮಾಡಿ ನಗರದಲ್ಲಿ ಹೆಚ್ಚಿನ ಮಟ್ಟದ ಶಬ್ಧ ಮಾಲಿನ್ಯಕ್ಕೆ ತನ್ನ ಕೊಡುಗೆಯುನ್ನು ಸೇರಿಸುವುದಿಲ್ಲ. ಮುಂದುಗಡೆಯ ಮುಖ್ಯ ದೀಪಗಳು ಪ್ರಖರವಾಗಿ ಉರಿಯುವಂತೆ ಮಾಡಿ ಎದುರುಗಡೆಯಿಂದ ಬರುವ ವಾಹನಗಳ ಚಾಲಕರ ಕಣ್ಣು ಕುರುಡಾಗುವಂತೆ ಮಾಡುವುದಿಲ್ಲ.

ಆ) ಸೌಜನ್ಯ ಶೀಲನಾಗಿರುತ್ತಾನೆ. ಬಲಭಾಗದಲ್ಲಿ ಬರುವ ವಾಹನಗಳಿಗೆ ದಾರಿ ಬಿಡುವುದು; ಪಾದಚಾರಿಗಳು ರಸ್ತೆ ದಾಟಲು ಅನುವು ಮಾಡಿಕೊಡಲು ವಾಹನವನ್ನು ನಿಧಾನಗೊಳಿಸುವುದು/ ಪದೇ ಪದೇ ಹಾರನ್ ಬಾರಿಸಿ ಅಸಮಾಧಾನವನ್ನು ತೋರಿಸದಿರುವುದು; ಇನ್ನೊಬ್ಬ ಚಾಲಕ ಸಂಕಷ್ಟದಲ್ಲಿದ್ದಾಗ ನೆರವಾಗುವುದು. </p>

ಇ) ಸುರಕ್ಷಿತನಾಗಿರುತ್ತಾನೆ. ಮಿತಿಮೀರಿದ ವೇಗದಲ್ಲಿ ಹೋಗುವುದಿಲ್ಲ. ಅಜಾಗರೂಕತೆಯಿಂದ ಬೇರೊಂದು ವಾಹನವನ್ನು ಹಿಂದಕ್ಕೆ ಹಾಕಿ ಮುಂದೆ ಹೋಗುವುದಿಲ್ಲ. ತನ್ನ ವಾಹನವನ್ನು ಸುಸ್ಥಿತಿಯಲ್ಲಿಟ್ಟಿರುತ್ತಾನೆ. ಪಥ ಶಿಸ್ತನ್ನು ಪಾಲಿಸುತ್ತಾನೆ. ಸಂಚಾರ ಸಂಕೇತ ಮತ್ತು ವಾಹನ ನಿಲುಗಡೆಯ ನಿರ್ಬಂಧಗಳನ್ನು ಪಾಲಿಸುತ್ತಾನೆ. </br>

ಮಾಡಿ ಮತ್ತು ಮಾಡದಿರಿ:


a.ಹಿಂದುಗಡೆಯಿಂದ ಇನ್ನೊಂದು ವಾಹನ ಸಮೀಪಿಸುತ್ತಿರುವಾಗ ಮುಂದುಗಡೆಯ ಮುಖ್ಯದೀಪಗಳನ್ನು ಡಿಪ್ ಮಾಡಿ.
b.ಮಳೆಯಲ್ಲಿ ಮಂಜು ಮುಸುಕಾಗಿದ್ದಾಗ ನಿಧಾನವಾಗಿ ಚಲಿಸಿ.
c.ನಿಮ್ಮ ಬಲಭಾಗದಲ್ಲಿ ಬರುವ ವಾಹನಗಳಿಗೆ ದಾರಿ ಬಿಡಿ
d.ವಾಹನ ಹೊರಸೂಸುವ ಹೊಗೆ ದಹ್ಯ ವಸ್ತುಗಳ ಪ್ರಮಾಣವನ್ನು ಕಾಲಕಾಲಕ್ಕೆ ಪರೀಕ್ಷಿಸಿಕೊಳ್ಳಿ.
e.ವಾಹನಗಳ ಮುಕ್ತ ಎಡ ತಿರುವಿಗೆ ಜಾಗ ಬಿಡಿ. ಎಡ ತಿರುವಿಗೆ ಮುಕ್ತ ಅವಕಾಶವುಳ್ಳ ಜಂಕ್ಷನ್ಗಳಲ್ಲಿ ಎಡಭಾಗದ ಪಥವನ್ನು ಅಡ್ಡಗಟ್ಟಬೇಡಿ.
f.ತಿರುವಿದ್ದಲ್ಲಿ ನಿಧಾನವಾಗಿ ಚಲಿಸಿ
g.ನಿಮ್ಮ ವಾಹನವನ್ನು ಹಾರ ಹೂಗೊಂಚಲುಗಳಿಂದ ಸಿಂಗರಿಸಬೇಡಿ ಅವು ನಿಮ್ಮ ದೃಷ್ಟಿಯನ್ನು ಮಿತಿಗೊಳಿಸುತ್ತವೆ ಮ್ತು ಇತರ ಚಾಲಕರ ಗಮನವನ್ನು ಬೇರೆಡೆಗೆ ಸೆಳೆಯುತ್ತವೆ.
h.ನಿಮ್ಮ ವಾಹನ ಚಾಲನಾೆ ಪರವಾನಗಿ ಮತ್ತು ನೊಂದಣಿಪತ್ರಗಳನ್ನು ಎಲ್ಲಾ ಸಮಯದಲ್ಲೂ ಜೊತೆಯಲ್ಲಿ ಒಯ್ಯಿರಿ.

 

i.ಅಪಾಯ ತಪ್ಪಸುವಿಕೆಯ ಹೊರತಾಗಿ ಹಾರನ್ ಮಾಡದಿರಿ.
j.ಉತ್ತಮವಾದ ದೀಪದ ಬೆಳಕುಳ್ಳ ರಸ್ತೆಯಲ್ಲಿ ಮುಂದುಗಡೆಯ ಮುಖ್ಯ ದೀಪಗಳನ್ನು ಬಳಸದಿರಿ.
k.ನಗರದ ರಸ್ತೆಗಳಲ್ಲಿ ಮುಖ್ಯ ದೀಪಗಳನ್ನು ಪೂರ್ಣ ಮಟ್ಟದಲ್ಲಿ ಉರಿಸದಿರಿ.
l.ಪಥಗಳ ಮದ್ಯೆ ನುಸುಳಬೇಡಿ
m.ಮದ್ಯಪಾನದ ಪ್ರಭಾವಕ್ಕೆ ಒಳಗಾಗಿ ವಾಹನವನ್ನು ಓಡಿಸದಿರಿ.
n.ವಾಹನ ನಿಲುಗಡೆಯ ಸ್ಥಳವಲ್ಲದ ಕಡೆ ವಾಹನವನ್ನು ನಿಲ್ಲಿಸುವಿರಿ.
o.ಚಲಿಸುವಾಗ ಮತ್ತು ನಿಲುಗಡೆ ಮಾಡುವಾಗ ವಾಹನದಿಂದ ವಾಹನದ ಮಧ್ಯೆ ಅಂತರವಿರಲಿ.

ಈ) ತಿರುವುಗಳಲ್ಲಿ ಚಲಿಸುವುದು

ಎಡ ತಿರುವು
a.ತಿರುಗುವ ಪಥ ಮುಕ್ತವಾಗಿದೆ ಮತ್ತು ನಿಮ್ಮ ಹಿಂದೆ ಎಡಭಾಗದಲ್ಲಿ ಯಾರೂ ಬರುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
b.ಕೈಯಿಂದ ಅಥವಾ ಸೂಚಕದಿಂದ ಸನ್ನೆ ಸಂಕೇತ ನೀಡಿ.
c. ತಿರುಗುವುದಕ್ಕೆ ಮೊದಲು, ತಿರುಗುವಾಗ ಮತ್ತು ನಂತರ ಸಾಧ್ಯವಾದಷ್ಟು ರಸ್ತೆಯ ಎಡಭಾಗದಲ್ಲಿ ತಿರುಗುವಿಕೆ ಪೂರ್ಣಗೊಂಡ ನಂತರ ನಿಧಾನವಾಗಿ ಮತ್ತು ಅಡ್ಡಿ ಆತಂಕ ಉಂಟು ಮಾಡದೆ ಇತರ ವಾಹನಗಳೊಡನೆ ಸೇರಿಕೊಳ್ಳಿ.

ಬಲ ತಿರುವು

a.ನಿಮ್ಮ ಹಿಂದಿರುವ ವಾಹನಗಳು ಸುರಕ್ಷಿತ ದೂರದಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.
b.ಬಲಸನ್ನೆ ಸಂಕೇತವನ್ನು ನೀಡಿ, ಕ್ರಮೇಣ ನಿಧಾನವಾಗಿ ಚಲಿಸಿ.
c.ಬೇರೆ ವಾಹನಗಳು ನಿಮ್ಮ ಎಡಭಾಗದಿಂದ ಮುಂದೆ ಹೋಗಲು ಸಾಧ್ಯವಾದಷ್ಟು ಅವಕಾಶ ಮಾಡಿಕೊಡಿ ಮತ್ತು ರಸ್ತೆಯ ಮಧ್ಯದ ಅತಿ ಎಡಕ್ಕೆ ಬನ್ನಿ.
d.ನಿಮ್ಮ ಮತ್ತು ಎದುರುಗಡೆಯಿಂದ ಬರುವ ವಾಹನಗಳ ನಡುವೆ ಸುರಕ್ಷಿತವಾದಷ್ಟು ಅಂತರ ಕಂಡುಕೊಂಡಲ್ಲಿ ತ್ವರಿತವಾಗಿ ಆದರೆ ಸುರಕ್ಷಿತವಾಗಿ ತಿರುಗಿಸಿ.

ಇತ್ತೀಚಿನ ನವೀಕರಣ​ : 05-08-2021 11:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ