ಅಭಿಪ್ರಾಯ / ಸಲಹೆಗಳು

ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಾಮುಖ್ಯತೆ

ಭಾರತೀಯ ಮೋಟಾರು ವಾಹನ ಕಾಯ್ದೆಯ  ಮುಖ್ಯ ಕಲಂಗಳು

ಕಲಂ 3:

ಚಾಲನಾ ಪರವಾನಗಿಯ ಅವಶ್ಯಕತೆ

(1) ಯಾವುದೇ ವ್ಯಕ್ತಿಯು ಮೋಟಾರು ವಾಹನವನ್ನು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪರಿಣಾಮಕಾರಿ ಚಾಲನಾ ಪರವಾನಗಿಯನ್ನು ಹೊಂದಿಲ್ಲದಿದ್ದರೆ ಓಡಿಸಬಾರದು ಮತ್ತು ಯಾವುದೇ ವ್ಯಕ್ತಿಯು ತನ್ನ ಚಾಲನಾ ಪರವಾನಗಿ ನಿರ್ದಿಷ್ಟವಾಗಿ ಅರ್ಹತೆ ಪಡೆಯದ ಹೊರತು [3 [ಮೋಟಾರು ಕ್ಯಾಬ್ ಅಥವಾ ಮೋಟಾರ್ ಸೈಕಲ್] ಅನ್ನು ತನ್ನ ಸ್ವಂತ ಬಳಕೆಗಾಗಿ ಅಥವಾ ಬಾಡಿಗೆಗೆ ಸೆಕ್ಷನ್ 75 ರ ಉಪವಿಭಾಗ (2) ರ ಅಡಿಯಲ್ಲಿ ಮಾಡಿದ ಯಾವುದೇ ಯೋಜನೆಯಡಿಯಲ್ಲಿ ಸೂಚಿಸಿರದ ಹೊರತು ಯಾವದೇ ಸಾರಿಗೆ ವಾಹನವನ್ನು ಚಲಾಯಿಸುವಂತಿಲ್ಲ


(2) ಮೋಟಾರು ವಾಹನವನ್ನು ಚಾಲನೆ ಮಾಡುವಲ್ಲಿ ಸೂಚನೆಗಳನ್ನು ಪಡೆಯುವ ವ್ಯಕ್ತಿಗೆ, ಯಾವ ಉಪವಿಭಾಗ (1) ಅನ್ವಯವಾಗುವುದಿಲ್ಲ ಎಂಬ ಷರತ್ತುಗಳು ಕೇಂದ್ರ ಸರ್ಕಾರವು ಸೂಚಿಸಬಹುದು.

 ಕಲಂ 4:

ಚಾಲನಾ ಪರವಾನಗಿ ಪಡೆಯಲು ವಯೋಮಿತಿ.

   1. 50 ಸಿಸಿ ಗಿಂತ ಕಡೆಮ ವಾಹನಗಳು- 16 ವರ್ಷ

   2. ಇತರೆ ವಾಹನಗಳು-18 ವರ್ಷ

   3. ಸಾರಿಗೆ ವಾಹನ - 20 ವರ್ಷ

 

ಕಲಂ 5:

ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನವನ್ನು ಚಲಾಯಿಸಲು ಮಾಲೀಕರು ಯಾರಿಗೂ ಅನುಮತಿ ಕೊಡಕೂಡದು. ಉದಾ: ತಂದೆಗೆ ಸೇರಿದ ವಾಹನವನ್ನು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಮಗ - ಮಗಳು ಚಲಾಯಿಸುತ್ತಿದ್ದಾಗ ಅಪರಾಧವೇನಾದರೂ ಘಟಿಸಿದಾಗ ತಂದೆಯಾದವರು ಅಲ್ಲಿ ಇಲ್ಲದಿದ್ದರೆ, ಆತನನ್ನು ವಿಚಾರಣೆಗೆ ಒಳಪಡಿಸಲಾಗುವುದು.


ಕಲಂ 19:

ಈ ಕಲಂ ನಂತೆ  ವ್ಯಕ್ತಿಯಿಬ್ಬರನ್ನು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದರಿಂದ ಅನರ್ಹಗೊಳಿಸುವ ಅಥವಾ ಅದನ್ನು ಮತ್ತೆ ಪರೀಕ್ಷಿಸುವ ಅಧಿಕಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರಿಗಿರುತ್ತದೆ: ವ್ಯಕ್ತಿಯು ಅಪರಾಧವನ್ನೇ ರೂಡಿಗತ ಮಡಿಕೊಂಡವನಾಗಿದ್ದರೆ ಅಥವಾ ಕುಡುಕನಾಗಿರುವುದೇ ಅಭ್ಯಾಸವಾಗಿದ್ದರೆ ಆತ ಯವುದೇ ಮಾದಕ ದ್ರವ್ಯ ಸೇವನೆಯ ಚಟವುಳ್ಳನಾಗಿದ್ದರೆ ಅಥವಾ ಮಾನಸಿಕ ವಿಕಲತೆ ಹೊಂದಿದ್ದರೆ, ಮಾದಕ ವ್ಯಸನಿ ಹಾಗೂ ಸೈಕೋಟ್ರೋಪಿಕ್ ಪದಾರ್ಥ ಅಧಿನಿಯಮ 1985 (1985 ರ 61) ಅರ್ಥದಲ್ಲಿ ತಿಳಿಸಲಾದ ಪದಾರ್ಥಗಳ ವ್ಯಸನಿಯು ಒಂದು ಸಂಜ್ಞೆಯ ಅಪರಾಧವು ಸಂಭವಿಸಿದ್ದ ಸಂದರ್ಭದಲ್ಲಿ ಮೋಟಾರು ವಾಹನವನ್ನು ಬಳಸುತ್ತಿದ್ದರೆ ಅಥವಾ ಬಳಸಿದ್ದಕ್ಕೆ ಮತ್ತು ಮೋಟಾರು ವಾಹನವನ್ನು ನಡೆಸುವ ಹಿಂದಿನ ಸಂದರ್ಭಗಳಲ್ಲಿ ತನ್ನ ಚಾಲನೆಯು ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವ ಸಾಧ್ಯತೆಯಿದೆ ಎಂದು ನಡೆದುಕೊಂಡಿದ್ದರೆ ಸಾರ್ವಜನಿಕರಿಗೆ ಅಪಾಯ ಅಥವಾ ಕಿರಿಕಿರಿ ಉಂಟುಮಡುವ ಸಾಧ್ಯತೆಯ ವರ್ತನೆಯನ್ನು ಮಾಡಿದ್ದರೆ.


ಕಲಂ 20:

 ಮೋಟಾರು ವಾಹನಗಳ ಕಾಯಿದೆಯ ಅನ್ವಯ ಅಪರಾಧವನ್ನು ಮಾಡಿದವನೆಂದು ಪರಿಗಣಿತವಾಗಿದ್ದರೆ ಅಥವಾ ಮೋಟಾರು ವಾಹನವನ್ನು ಬಳಸಿದ್ದರಿಂದ ಆದಂತಹ ಅಪರಾಧವನ್ನು ಮಾಡಿದ್ದರೆ ನ್ಯಾಯಾಲಯವು ಅಂತಹ ವ್ಯಕ್ತಿಯನ್ನು ಡ್ರೈವಿಂಗ್ ಲೈಸೆನ್ಸ್ ಹೊಂದುವುದರಿಂದ ಅನರ್ಹಗೊಳಿಸಬಹುದು ಜೊತೆಗೆ ಇನ್ನಿತರ ಶಿಕ್ಷೆಯನ್ನು ವಿಧಿಸಬಹುದು. ಕೆಳಕಂಡ ರೀತಿಯ ಅಪರಾಧ ಮಾಡಿದ್ದರೆ ಅನರ್ಹಗೊಳಿಸುವುದು ಕಡ್ಡಾಯವಾಗಿರುತ್ತದೆ. ವಾಹನವು ರಸ್ತೆ ಅಪಘಾತದಲ್ಲಿ ಭಾಗಿಯಗಿದ್ದಾಗ ಸಮವಸ್ತ್ರದಲ್ಲಿರುವ ಉಪ ನಿರೀಕ್ಷಕರ ದರ್ಜೆಗಿಂತ ಕೆಳಗಿಲ್ಲದ ಶ್ರೇಣಿಯ ಪೊಲೀಸ್ ಅಧಿಕಾರಿಯೊಬ್ಬರು ವಾಹನವನ್ನು ನಿಲ್ಲಿಸುವಂತೆ ತಿಳಿಸಿದರೂ ವಾಹನವನ್ನು ನಿಲ್ಲಿಸದಿದ್ದಾಗ (ಕಲಂ - 132) ತನ್ನ ವಾಹನವು ಅಪಘಾತವನ್ನುಂಟು ಮಾಡಿದ್ದು, ಅದಕ್ಕೆ ತುತ್ತಾದ ವ್ಯಕ್ತಿಯನ್ನು ಸಮೀಪದ ಆಸ್ಪತ್ರ್ರೆ / ವೈದ್ಯರಲ್ಲಿಗೆ ಸಾಗಿಸದಿದ್ದಾಗ (ಕಲಂ - 134)


ಕಲಂ 21:

 ವ್ಯಕ್ತಿಯೊಬ್ಬ ಅಪಾಯಕಾರಿಯಗಿ ಡ್ರೈವ್ ಮಾಡಿದ ಕಾರಣ ಈಗಾಗಲೇ ಕಲಂ 184 ರ ಅನ್ವಯ ಒಂದು ಸಲ ಅಪರಾಧಿಯೆಂದು ಪರಿಗಣಿತವಾಗಿದ್ದು, ಮತ್ತೊಮ್ಮೆ ಅಪಾಯಕಾರಿಯಗಿ ಡ್ರೈವ್ ಮಾಡಿ ಸಾವನ್ನೊ/ಗಂಭೀರವಾದ ಗಾಯವನ್ನುಂಟು ಮಾಡಿದ್ದರೆ ಮತ್ತು ಎರಡನೇ ಅಪರಾಧಕ್ಕಾಗಿ ಮೊಕದ್ದಮೆ ದಾಖಲಾಗಿದ್ದರೆ ಆ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ಗರಿಷ್ಠ 6 ತಿಂಗಳು ಅವಧಿಯ ವರೆಗೆ ಅಥವಾ ನ್ಯಾಯಲಯದಲ್ಲಿ ಮೊಕದ್ದಮೆಯು ತೀರ್ಮಾನವಾಗುವವರೆಗೆ ತಾನಾಗಿಯೇ ಅಮನತ್ತಾಗುತ್ತದೆ.


ಕಲಂ 22:

 ವ್ಯಕ್ತಿಯು ಅಪಾಯಕಾರಿಯಗಿ ವಾಹನ ಚಾಲನೆ ಮಾಡಿದ್ದಕ್ಕಾಗಿ 184ನೇ ಕಲಂನ ಅನ್ವಯ ಅಪರಾಧಿಯೆಂದು ಬಯಸಿದ್ದರೆ ನ್ಯಾಯಲಯವು ಆತನ ಡ್ರೈವಿಂಗ್ ಲೈಸೆನ್ಸ್ ನ್ನು ರದ್ದುಪಡಿಸಬಹುದು. ವ್ಯಕ್ತಿಯೊಬ್ಬನನ್ನು ಮಧ್ಯಪಾನ ಮಾಡಿ, ವಾಹನ ಚಾಲನೆ ಮಾಡಿದ್ದಕ್ಕಾಗಿ 1985 ನೇ ಕಲಂ ನ ಅನ್ವಯ ಎರಡನೇ ಸಲ ಬಂಧಿಸಿದ್ದರೆ ಸಂಬಂಧಪಟ್ಟ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ನ್ನು ನ್ಯಾಯಲಯವು ರದ್ದುಪಡಿಸಬಹುದು.


ಕಲಂ 39:

 ಸೂಕ್ತ ನೊಂದಣಿಯಿಲ್ಲದೇ ಹಾಗೂ ನೋಂದಣಿ ಗುರುತನ್ನು ಸರಿಯಾಗಿ ಪ್ರದರ್ಶಿಸದೇ ಯವುದೇ ವ್ಯಕ್ತಿಯು ಯವುದೇ ಮೋಟಾರು ವಾಹನವನ್ನು ಚಾಲನೆ ಮಾಡತಕ್ಕದಲ್ಲ, ಮತ್ತು ಯವುದೇ ಮಲೀಕರು ಅದಕ್ಕೆ ಅನುಮತಿಕೊಡತಕ್ಕ ದ್ದಲ್ಲ. ಸೂಕ್ತ ನೋಂದಣಿಯಿಲ್ಲದೇ ಓಡಾಡುತ್ತಿದ್ದರೆ ಅಪಘಾತ ನಡೆದ ಸಂದರ್ಭದಲ್ಲಿ ಮಾಲೀಕರು ಸ್ಥಳದಲ್ಲಿಲ್ಲದಿದ್ದರೂ ಅವರನ್ನು ವಿಚಾರಣೆಗೊಳಪಡಿಸಬಹುದು.


ಕಲಂ 49:

 ನೋಂದಣಿ ಪ್ರಮಾಣ ಪತ್ರದಲ್ಲಿ ನಮೂದಾಗಿರುವ ವಿಳಾಸದಲ್ಲಿ ಏನಾದರೂ ಬದಲಾವಣೆಯದ ಸಂದರ್ಭದಲ್ಲಿ ಅಂತಹ ಬದಲಾವಣೆಯಾದ 30 ದಿನಗಳೊಳಗಾಗಿ ಅದನ್ನು ತಿಳಿಸಬೇಕು.


ಕಲಂ 50:

 ವಾಹನವನ್ನು ರಾಜ್ಯದೊಳಗೆ ಮಾರಾಟ ಮಾಡಿದ್ದರೆ ಅದರ ವರ್ಗಾವಣೆಯದ 14 ದಿನಗಳೊಳಗಾಗಿ ಮಾಲೀಕತ್ವದ ವರ್ಗಾವಣೆಯ ಬಗ್ಗೆ ತಿಳಿಸಬೇಕು. ರಾಜ್ಯದ ಹೊರಗಡೆ ಮಾರಾಟವಾಗಿದ್ದಲ್ಲಿ 85 ದಿನಗಳೊಳಗಾಗಿ ತಿಳಿಸಬೇಕು.


ಕಲಂ 51:

 ಬಾಡಿಗೆ, ಖರೀದಿ ಅಥವಾ ಲೀಸ್ ಅಥವಾ ಅಡಮಾನ, ಒಪ್ಪಂದದನ್ವಯ ಮೋಟಾರು ವಾಹನದ ಮಾಲೀಕತ್ವವನ್ನು ಹೊಂದಿದ್ದರೆ ಅಂತಹ ಮಾಲೀಕತ್ವವನ್ನು ಯಾವ ವ್ಯಕ್ತಿಗೆ ಮಾಡಲಾಗಿದೆಯೋ ಅಂತಹ ವ್ಯಕ್ತಿಯ ಲಿಖಿತ ಒಪ್ಪಿಗೆಯಿಲ್ಲದೇ ವರ್ಗಾವಣೆ ಮಡುವಂತಿಲ್ಲ.

ಕಲಂ 52:

 ನೋಂದಣಿ ಪ್ರಮಾಣ ಪತ್ರದಲ್ಲಿ ದಾಖಲಾಗಿರುವ ವಿವರಗಳನ್ನು ನಿಖರತೆಗೆ ಭಂಗತರುವಷ್ಟರ ಮಟ್ಟಿಗೆ ಯವುದೇ ಮಾಲೀಕರು ಸಂಬಂಧಪಟ್ಟ ವಾಹನದಲ್ಲಿ ಮಾಡತಕ್ಕದ್ದಲ್ಲ. ಅಂತಹ ಬದಲಾವಣೆಗಳನ್ನು ಮಾಡುವುದಕ್ಕೆ ಮುಂಚಿತವಾಗಿಯೇ ಸೂಚನೆ ಕೊಟ್ಟು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಯ ಪೂರ್ವಾನುಮತಿಯೊಂದಿಗೆ ಮಾಡಬೇಕು.


ಕಲಂ 115:

 ಸಾರ್ವಜನಿಕರ ಸುರಕ್ಷತೆ ಅಥವಾ ಅನುಕೂಲತೆಯ ದೃಷ್ಟಿಯಿಂದ ಅಥವಾ ಯಾವುದೇ ರಸ್ತೆಯ ಅಥವಾ ಸೇತುವೆಯ ಸ್ಥಿತಿ ಸರಿಯಿಲ್ಲದ ಕಾರಣದಿಂದ ಕೆಲವೊಂದು ವಾಹನಗಳಿಗೆ ನಿರ್ಬಂಧ ಒಡ್ಡಬಹುದು ಅಥವಾ ನಿಷೇದಿಸಬಹುದು. ಒಂದು ವೇಳೆ ನಿರ್ಬಂಧದ ಅವಧಿಯು ಒಂದು ತಿಂಗಳಿಗಿಂತ ಕಡಿಮೆ ಇದ್ದರೆ ಯಾವುದೇ ಅಧಿಸೂಚನೆ ಕೊಡುವ ಅಗತ್ಯವಿಲ್ಲ.


ಕಲಂ 119:

 ಪ್ರತಿಯೊಬ್ಬ ವಾಹನ ಚಾಲಕರೂ ವಾಹನವನ್ನು ಸಂಚಾರ ಸಂಕೇತ ಫಲಕಗಳ ಸೂಚನೆಗಳಿಗೆ ಅನುಗುಣವಾಗಿ ಡ್ರೈವ್ ಮಾಡಬೇಕು. ತಾತ್ಕಾಲಿಕ ಸಂಚಾರ ನಿಯಂತ್ರಣ ಮಾಡುತ್ತಿರುವ ಯಾವುದೇ ಪೊಲೀಸ್ ಅಧಿಕಾರಿಯು ತನಗೆ ನೀಡಿದ ನಿರ್ದೇಶನಗಳನ್ನು ಅನುಸರಿಸತಕ್ಕದ್ದು.


ಕಲಂ 121:

 ವಾಹನವನ್ನು ನಿಲ್ಲಿಸುವ ಅಥವಾ ಎಡಕ್ಕೆ ಅಥವಾ ಬಲಕ್ಕೆ ತಿರುವು ತೆಗೆದುಕೊಳ್ಳುವ ಉದ್ದೇಶವನ್ನು ಚಾಲಕನು ಹೊಂದಿದ್ದರೆ ಆ ಬಗ್ಗೆ ಸೂಚನೆಗಳನ್ನು ನೀಡುವುದು ಕಡ್ಡಾಯ. ಆತನು ಹಾಗೆ ಮಾಡದಿದ್ದರೆ, ಆತನನ್ನು ವಿಚಾರಣೆಗೆ ಒಳಪಡಿಸಬಹುದು.


ಕಲಂ 122: 

ರಸ್ತೆಯ ಇತರೆ ಬಳಕೆದಾರರಿಗೆ ಆಪಾಯ, ಅಡಚಣೆ ಅಥವಾ ಅನಗತ್ಯ ಅನಾನುಕೂಲತೆ ಉಂಟು ಮಾಡುವ ಹಾಗೂ ಅಂತಹ ಸಾಧ್ಯತೆಯಿರುವ ರೀತಿಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ ಹೋಗುವುದು ಅಪರಾಧ. ಅಂತಹ ವಾಹನಗಳನ್ನು ಪೊಲೀಸರು ಎಳೆದೊಯ್ಯಬಹುದು ಮತ್ತು ಹೀಗೆ ಎಳೆಯುವುದಕ್ಕೆ ತಗುಲುವ ಶುಲ್ಕವನ್ನು ಹಾಗೂ ಆತನ ಅಪರಾಧಕ್ಕೆ ಶುಲ್ಕವನ್ನು ವಿಧಿಸಬಹುದು.


ಕಲಂ 123: 

ಫುಟ್ ಬೋರ್ಡ್ ಪ್ರಯಾಣ ಅಥವಾ ವಾಹನದ ಟಾಪ್ ಮೇಲೆ ಅಥವಾ ಬಾನೆಟ್ ಮೇಲೆ ಪ್ರಯಣವನ್ನು ನಿಷೇಧಿಸಲಾಗಿದೆ ಅಂತಹ ವಾಹನವನ್ನು ಚಾಲಿಸಲು ಡ್ರೈವರ್ ಹಾಗೂ ಕಂಡಕ್ಟರ್ ನಿರಾಕರಿಸಬಹುದು.


ಕಲಂ:127:

          i) ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ೧೦ ಗಂಟೆಗಳಿಗೂ ಹೆಚ್ಚು ಕಾಲ ಹಾಗೇ ಬಿಟ್ಟು ಹೋಗಿದ್ದರೆ / ಅಥವಾ ನಿಲುಗಡೆ ಮಡಬಾರದು ಎಂದಿದ್ದ ಸ್ಥಳದಲ್ಲಿ ನಿಲ್ಲಿಸಿದ್ದರೆ ಸಮವಸ್ತ್ರದಲ್ಲಿರುವ ಆ ಪ್ರದೇಶದ ಪೊಲೀಸ್ ಅದಿಕಾರಿಯು ಅದನ್ನು  

           ಎಳೆದೊಯ್ಯುವಂತೆ ಆಜ್ಞೆ ಮಾಡಬಹುದು.

          ii) ಸಂಚಾರಕ್ಕೆ ಅಡಚಣೆ ಉಂಟು ಮಾಡುವ ರೀತಿಯಲ್ಲಿ ವಾಹನವನ್ನು ಹಾಗೆ ಬಿಟ್ಟು ಹೋಗಿದ್ದರೆ ಆ ಪ್ರದೇಶದ ಪೊಲೀಸ್ ಅಧಿಕಾರಿಯ ಅಜ್ಞೆಯ ಮೇರೆಗೆ ತಕ್ಷಣವೇ ಅದನ್ನು ಎಳೆದೊಯ್ಯುವ ಮೂಲಕ ಅಲ್ಲಿಂದ ತೆಗೆಯಬಹುದು.

          iii) ಎಳೆದೊಯ್ಯುವದಕ್ಕೆ ತಗಲಿದ ಖರ್ಚನ್ನು ಮಾಲೀಕನು ತೆರಬೇಕು. ಇನ್ನಾವುದಾದರೂ ದಂಡ ವಿದಿಸಿದ್ದರೆ ಅದನ್ನೂ ತೆರಬೇಕು.


ಕಲಂ128:

 ದ್ವಿಚಕ್ರ ವಾಹನದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಹಿಂದೆ ಕೂರಿಸಿಕೊಂಡು ಹೋಗುವುದು ಅಪರಾಧ.


ಕಲಂ129: 

ಸಾರ್ವಜನಿಕ ಸ್ಥಳದಲ್ಲಿ ಮೋಟರ್ ಸೈಕಲ್ ಮೇಲೆ ಹೋಗುವಾಗ ಐ.ಎಸ್.ಐ. ಗುರುತಿನ ಹೆಲ್ಮೆಟ್ ಅನ್ನು ಧರಿಸುವುದು ಕಡ್ಡಾಯ.


ಕಲಂ 133: 

ವಾಹನವೊಂದು ಅಪರಾಧದಲ್ಲಿ ಭಾಗಿಯಗಿದ್ದರೆ ಪೊಲೀಸ್ ಅಧಿಕಾರಿಯು ಕೇಳಿದಾಗ ವಾಹನದ ಡ್ರೈವರ್ ಅಥವಾ ಕಂಡೆಕ್ಟರ್‌ಗಳ ಹೆಸರು, ವಿಳಾಸ ಹಾಗೂ ಲೈಸೆನ್ಸ್ ವಿವರಗಳ ಮಹಿತಿಯನ್ನು ಒದಗಿಸುವುದು ಸಂಬಂಧಪಟ್ಟ ಮಾಲೀಕರ ಕರ್ತವ್ಯವಾಗಿರುತ್ತದೆ.


ಕಲಂ 136:

 ಅಪಘಾತದಲ್ಲಿ ಭಾಗಿಯದ ಎಲ್ಲಾ ವಾಹನಗಳ ತಪಾಸಣೆಯನ್ನು ಮೋಟಾರ್ ವಾಹನ ಇಲಾಖೆಯ ಅಧಿಕಾರಿಸಲ್ಕಪಟ್ಟ  ಅಧಿಕಾರಿಗಳು ತನಿಖೆ ಮಾಡಬಹುದು.


ಕಲಂ 140 : 

ರಸ್ತೆ ಅಪಘಾತದ ಕಾರಣದಿಂದಾಗಿ ಯಾವುದೇ ವ್ಯಕ್ತಿಗೆ ಶಾಶ್ವತ ಅಂಗವಿಕಲತೆ ಉಂಟಾಗಿದ್ದರೆ, ಸಂಬಂಧಪಟ್ಟ ವಾಹನದ ಮಾಲೀಕರು ಅಪಘಾತದಿಂದ ಅಂಗವಿಕಲಗೊಂಡ ಅಥವಾ ಮರಣ ಹೊಂದಿದ ವ್ಯಕ್ತಿಯ ತಪ್ಪಿರಲಿ, ಇಲ್ಲದಿರಲಿ ಅವರಿಗೆ ಪರಿಹಾರವನ್ನು ನೀಡಬೇಕಾದ್ದು ಅವರ ಹೊಣೆಗಾರಿಕೆಯಗಿರುತ್ತದೆ. ಮರಣಕ್ಕೆ ನೀಡಬೇಕಾದ ಪರಿಹಾರ ಮೊತ್ತ ರೂ: 50,000/- ಶಾಶ್ವತ ಅಂಗವಿಕಲತೆಗೆ ನೀಡಬೇಕಾದ ಪರಿಹಾರದ ಮೊತ್ತ ರೂ: 25000/- ಇಂತಹ ಕ್ಲೇಮುಗಳಲ್ಲಿ ಕ್ಲೇಮುದಾರರ ಶಾಶ್ವತ ಅಂಗವಿಕಲತೆಗೆ ಅಥವಾ ಮರಣಕ್ಕೆ ಸಂಬಂದಪಟ್ಟ ವಾಹನದ ಮಾಲೀಕರ ತಪ್ಪು , ಅಲಕ್ಷ ಅಥವಾ ಉಲ್ಲಂಘನೆಯ ಕಾರಣವೆಂಬ ಬಗ್ಗೆ ವಾದಿಸಿ ವಾದವನ್ನು ಸ್ಥಾಪಿಸಬೇಕಾದ ಅಗತ್ಯವೇನಿಲ್ಲ. ಯಾವ ವ್ಯಕ್ತಿಯ ಮರಣ ಅಥವಾ ಶಾಶ್ವತ ಅಂಗವಿಕಲತೆಗೆ ಸಂಬಂದಿಸಿದಂತೆ ಕ್ಲೇಮು ಮಾಡಲಾಗಿದೆಯೋ ಅಂತಹ ಕ್ಲೇಮನ್ನು ಆ ವ್ಯಕ್ತಿಯ ತಪ್ಪು, ಅಥವಾ ಉಲ್ಲಂಘನೆಯ ಕಾರಣದಿಂದ ಆದದ್ದು ಎಂದು ಅನೂರ್ಜಿತಗೊಳಿತಕ್ಕದ್ದಲ್ಲ. ವಾಹನದ ಮಾಲೀಕರೇ ಅಲ್ಲದೇ ವಿಮಾ ಕಂಪನಿಯೂ ಸಹಾ ಈ ಪರಿಚ್ಛೇಧದ ಅನ್ವಯ ಹೊಣೆಯಾಗಿರುತ್ತದೆ.


ಕಲಂ 146: 

ಸೂಕ್ತ ವಿಮಾ ಪ್ರಮಣ ಪತ್ರವಿಲ್ಲದೇ ಯಾವುದೇ ವಾಹನವನ್ನು ರಸ್ತೆಯಲ್ಲಿ ಬಳಸತಕ್ಕದ್ದಲ್ಲ. ಇದರ ಜವಾಬ್ದಾರಿಯು ವಾಹನದ ಮಾಲೀಕರಿಗೆ ಸೇರಿರುತ್ತದೆ.


ಕಲಂ 158:

 ಯಾವುದೇ ಸಾರ್ವಜನಿಕ ಸ್ಥಳದಲ್ಲಿ ವಾಹನವನ್ನು ನಡೆಸುತ್ತಿರುವ ಯಾವುದೇ ವ್ಯಕ್ತಿಯು ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ ಕೇಳಿದಾಗ ಕೆಳಕಂಡ ದಾಖಲೆಗಳನ್ನು ತೋರಿಸಬೇಕಾಗುತ್ತದೆ. 1.ವಿಮಾ ಪ್ರಮಣ ಪತ್ರ 2.ನೋಂದಣಿ ಪ್ರಮಾಣ ಪತ್ರ 3.ಡ್ರೈವಿಂಗ್ ಲೈಸೆನ್ಸ್ 4.ಸಾಗಣೆ ವಾಹನಗಳ ಸಂದರ್ಭದಲ್ಲಿ, ಅರ್ಹತೆ ಧಡೀಕರಣ ಪತ್ರ ಮತ್ತು ರಹದಾರಿ ಪತ್ರವನ್ನು ತೋರಿಸಬೇಕಾಗುತ್ತದೆ.


ಕಲಂ 160:

 ರಸ್ತೆ ಅಪಘಾತದಲ್ಲಿ ಪರಿಹಾರವನ್ನು ಕೋರಬೇಕಾದ ಉದ್ದೇಶಕ್ಕೆ ಭಾಗಿಯದ ವಾಹನದ ವಿವರ, ಡ್ರೈವರ್ ವಿವರ, ಗಾಯಳುಗಳ ವಿವರ, ಹಾನಿಯದ ಆಸ್ತಿಯ ವಿವರ ಇವುಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯ ಉಸ್ತುವಾರಿಕೆ ವಹಿಸಿರುವ ಪೊಲೀಸ್ ಅಧಿಕಾರಿಯಿಂದ ನಿಗಧಿತ ಶುಲ್ಕವನ್ನು ಸಂದಾಯ ಮಾಡಿ ಪಡೆದುಕೊಳ್ಳಬಹುದು.


ಕಲಂ 161:

 ಅಪಘಾತ ಮಾಡಿ ಪರಾರಿಯದ, ರಸ್ತೆ ಅಪಘಾತದಲ್ಲಿ ಯಾವುದೇ ವ್ಯಕ್ತಿ ಮರಣ ಹೊಂದಿದ ಸಂದರ್ಭದಲ್ಲಿ ರೂ.25000/- ಪರಿಹಾರ ಧನವನ್ನು ನೀಡಲಾಗುವುದು. ಗಂಭೀರವಾದ ಗಾಯದ ಸಂದರ್ಭದಲ್ಲಿ ನೀಡಬೇಕಾದ ಪರಿಹಾರದ ಮೊತ್ತ 12,500/- ಆಗಿರುತ್ತದೆ. ಈ ಪರಿಹಾರವನ್ನು ಸಂಬಂಧಪಟ್ಟ ಜಿಲ್ಲಾ ದಂಢಾಧಿಕಾರಿಯು ನೀಡಬೇಕಾಗಿರುತ್ತದೆ 

 

ಇತ್ತೀಚಿನ ನವೀಕರಣ​ : 05-08-2021 11:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ