ಅಭಿಪ್ರಾಯ / ಸಲಹೆಗಳು

ಸಂಘಟನೆ

ಸಂಘಟನೆ :

ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಮುಖ್ಯಸ್ಥರಾಗಿದ್ದಾರೆ. ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಅಧೀನದಲ್ಲಿ ಪೊಲೀಸ್‌ ಮಹಾನಿರ್ದೇಶಕರು, ಅಪರ ಪೊಲೀಸ್‌ ಮಹಾನಿರ್ದೇಶಕರು,  ಪೊಲೀಸ್‌ ಮಹಾನಿರೀಕ್ಷಕರು ಕರ್ತವ್ಯ ನಿರ್ವಹಿಸುತ್ತಾರೆ.

ಕರ್ನಾಟಕ ರಾಜ್ಯದಲ್ಲಿ 6 ಪೊಲೀಸ್‌ ಆಯುಕ್ತಾಲಯಗಳಿದ್ದು, ಬೆಂಗಳೂರು ನಗರದ ಆಯುಕ್ತರು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರ ದರ್ಜೆಯವರಾಗಿರುತ್ತಾರೆ. ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಕಲ್ಬುರ್ಗಿ ನಗರಗಳ ಆಯುಕ್ತರು ಉಪ ಪೊಲೀಸ್‌ ಮಹಾನಿರೀಕ್ಷಕರ ದರ್ಜೆಯವರಾಗಿರುತ್ತಾರೆ.

ರಾಜ್ಯದಲ್ಲಿ 7 ವಲಯಗಳಿದ್ದು, ಪ್ರತಿಯೊಂದು ವಲಯಕ್ಕೂ ಪೊಲೀಸ್‌ ಮಹಾನಿರೀಕ್ಷಕರ ದರ್ಜೆಯ  ಅಧಿಕಾರಿಗಳು ಉಸ್ತುವಾರಿಯಾಗಿರುತ್ತಾರೆ. ಪ್ರತಿ ವಲಯವು 3 ರಿಂದ 6 ಜಿಲ್ಲೆಗಳನ್ನೊಳಗೊಂಡಿರುತ್ತವೆ.  ಪ್ರತಿಯೊಂದು  ಜಿಲ್ಲೆಯ ಉಸ್ತುವಾರಿಯನ್ನು ಪೊಲೀಸ್‌ ಅಧೀಕ್ಷಕರ ದರ್ಜೆಯ ಅಧಿಕಾರಿ ಹೊಂದಿದ್ದು, ಅವರುಗಳು ಘಟಕಾಧಿಕಾರಿಗಳಾಗಿರುತ್ತಾರೆ.

ಪ್ರತಿ ವಲಯಗಳು ಒಳಗೊಂಡಿರುವ ಜಿಲ್ಲೆಗಳ ಮಾಹಿತಿ ಈ ಕೆಳಕಂಡಂತಿರುತ್ತದೆ.

ಕ್ರ.ಸಂ ವಲಯ ಜಿಲ್ಲೆಗಳು
1 ದಕ್ಷಿಣ ವಲಯ,  ಮೈಸೂರು

ಮೈಸೂರು

ಕೊಡಗು

ಮಂಡ್ಯ

ಹಾಸನ

ಚಾಮರಾಜನಗರ
2 ಪಶ್ಚಿಮ ವಲಯ,  ಮಂಗಳೂರು

ದಕ್ಷಿಣ ಕನ್ನಡ

ಉತ್ತರ ಕನ್ನಡ

ಉಡುಪಿ

ಚಿಕ್ಕಮಗಳೂರು
3 ಪೂರ್ವ ವಲಯ, ದಾವಣಗೆರೆ

ಚಿತ್ರದುರ್ಗ

ಹಾವೇರಿ

ಶಿವಮೊಗ್ಗ

ದಾವಣಗೆರೆ
 4 ಕೇಂದ್ರವಲಯ,  ಬೆಂಗಳೂರು

ತುಮಕೂರು

ಕೋಲಾರ

ಬೆಂಗಳೂರು ಗ್ರಾಮಾಂತರ ಜಿಲ್ಲೆ

ಕೆ.ಜಿ.ಎಫ್‌

ಚಿಕ್ಕಬಳ್ಳಾಪುರ

ರಾಮನಗರ
ಉತ್ತರ ವಲಯ, ಬೆಳಗಾವಿ

ಬೆಳಗಾವಿ

ವಿಜಯಪುರ

ಧಾರವಾಡ

ಬಾಗಲಕೋಟೆ

ಗದಗ
 6  ಈಶಾನ್ಯ ವಲಯ, ಕಲಬುರಗಿ

ಕಲಬುರಗಿ

ಬೀದರ್‌

ಯಾದಗಿರಿ
7 ಬಳ್ಳಾರಿ ವಲಯ, ಬಳ್ಳಾರಿ

ಬಳ್ಳಾರಿ

ರಾಯಚೂರು

ಕೊಪ್ಪಳ

ಕಾನೂನು ಮತ್ತು  ಸುವ್ಯವಸ್ಥೆ :

ಈ  ವಿಭಾಗದ ಮುಖ್ಯಸ್ಥರು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿರುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಾರ್ವಜನಿಕರ ಆಸ್ತಿ ಪಾಸ್ತಿ ಕಾಪಾಡುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಅಂದರೆ ಎಸ್‌ಸಿ-ಎಸ್‌ಟಿ ಪ್ರಕರಣಗಳು, ಕೋಮು ಗಲಭೆ, ದೊಂಬಿ, ಗಲಾಟೆಗಳಂತಹ ಪ್ರಕರಣಗಳಲ್ಲಿ ಉಸ್ತುವಾರಿ ಘಟಕವಾಗಿರುತ್ತದೆ.

ಗುಪ್ತಚರ ವಿಭಾಗ :

ಗುಪ್ತಚರ ವಿಭಾಗದ ಮುಖ್ಯಸ್ಥರು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿರುತ್ತಾರೆ. ಇವರ ಸಹಾಯಕರಾಗಿ  ಇಬ್ಬರು ಪೊಲೀಸ್‌ ಮಹಾನಿರೀಕ್ಷಕರುಗಳು ಮತ್ತು 4 ಜನ ಪೊಲೀಸ್‌ ಅಧೀಕ್ಷಕರು ಗುಪ್ತಚರ ವಿಭಾಗದ ಮುಖ್ಯ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.

ರಾಜ್ಯದಲ್ಲಿ  ಬೆಂಗಳೂರು, ಮೈಸೂರು, ಮಂಗಳೂರು, ಕಲ್ಬುರ್ಗಿ ಮತ್ತು ಬೆಳಗಾವಿ ನಗರಗಳಲ್ಲಿ 5 ಗುಪ್ತಚರ ವಿಭಾಗಗಳಿದ್ದು ಪ್ರತಿ ವಿಭಾಗದಲ್ಲೂ ಪೊಲೀಸ್‌ ಅಧೀಕ್ಷಕ ದರ್ಜೆಯ ಅಧಿಕಾರಿ ನೇತೃತ್ವ ವಹಿಸಿಕೊಂಡಿರುತ್ತಾರೆ.

ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗ

ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಮುಖ್ಯಸ್ಥರು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಾಗಿರುತ್ತಾರೆ. ಈ ವಿಭಾಗವು  ಬೆರಳಚ್ಚು ಮುದ್ರೆ ಘಟಕ, ವಿಧಿ ವಿಜ್ಞಾನ ಪ್ರಯೋಗಾಲಯ ವಿಭಾಗಗಳನ್ನು ಒಳಗೊಂಡಿರುತ್ತದೆ.

ಪೊಲೀಸ್ ಗಣಕ ವಿಭಾಗ

ಪೊಲೀಸ್ ಇಲಾಖೆಯಲ್ಲಿ ದಾಖಲೆ ಪತ್ರಗಳು ಮುಖ್ಯ ಇವು ಇಲ್ಲದಿದ್ದರೆ ಪೊಲೀಸ್ ಠಾಣೆ ಇದ್ದರೂ ಸತ್ತಂತೆ. ದಾಖಲೆ ಪತ್ರಗಳ ನಿರ್ವಹಣೆ ಭಾರೀ ಸಮಸ್ಯೆ ತಂದೊಡ್ಡಿದಾಗ ಇಲಾಖೆ ಕಂಪ್ಯೂಟರ್ ಪದ್ದತಿಗೆ ಮೊರೆ ಹೋಯಿತು. ಅಪರಾಧಿಗಳ ಭಾವಚಿತ್ರ, ಬೆರಳಿನ ಗುರುತು ಅವರ ಇತಿಹಾಸದ ವಿವರಗಳನ್ನು ಸಂಗ್ರಹಿಸುವುದೇ ಇದರ ಕೆಲಸ. ಎಸ್ಪಿ ದರ್ಜೆ ಅಧಿಕಾರಿ ಮುಖ್ಯಸ್ಥರು. ಪ್ರಸ್ತುತ ಪೊಲೀಸ್ ಇಲಾಖೆಯ ಗಣಕೀಕರಣದ ಉಸ್ತುವಾರಿಯನ್ನು ಪೊಲೀಸ್ ಗಣಕ ವಿಭಾಗ ನಿರ್ವಹಿಸುತ್ತದೆ ಮತ್ತು ಎಲ್ಲಾ ಮಾಹಿತಿ ತಂತ್ರಾಂಶ ಯೋಜನೆಗೆ ಪೊಲೀಸ್ ಗಣಕ ವಿಭಾಗ ಒಂದು ಸಮನ್ವಯ ಕೇಂದ್ರವಾಗಿದೆ. 1977ರಲ್ಲಿ ಅಪರಾಧಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು, ಅಪರಾಧಿಗಳ ಬಗ್ಗೆ ಗುಪ್ತ ಮಾಹಿತಿಯನ್ನು ಎಲ್ಲರಿಗೂ ತಲುಪುವಂತೆ ಮಾಡಲು (ರಾಜ್ಯಾದ್ಯಂತ ಮತ್ತು ರಾಷ್ಟ್ರಾದ್ಯಂತ) ಮತ್ತು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಕ್ರೂಢೀಕರಣ ಮಾಡುವ ಉದ್ದೇಶದಿಂದ, ರಾಜ್ಯ ಅಪರಾಧ ದಾಖಲಾತಿ ವಿಭಾಗವಾಗಿ ಮರು ವಿಂಗಡಣೆಯಾಗಿ ಎ.ಡಿ.ಜಿ.ಪಿ ರವರ ಉಸ್ತುವಾರಿಯಲ್ಲಿ ಪೊಲೀಸ್‌ ಗಣಕ ವಿಭಾಗ ಕಾರ್ಯನಿರ್ವಹಿಸುತ್ತಿದೆ. 

ಅಪರಾಧ ತನಿಖಾ ಇಲಾಖೆ (ಸಿಐಡಿ) :

ಪೊಲೀಸ್‌ ಮಹಾನಿರ್ದೇಶಕರು ಈ ಘಟಕದ ಮುಖ್ಯಸ್ಥರಾಗಿರುತ್ತಾರೆ. ಇವರ ನೇತೃತ್ವದಲ್ಲಿ ವಿಶೇಷ ತನಿಖಾ ಘಟಕದ ಅಪರಾಧ ತನಿಖಾ ಇಲಾಖೆ, ಅರಣ್ಯ ಘಟಕ, ಆರ್ಥಿಕ ಅಪರಾಧಗಳು ಮತ್ತು ಸೈಬರ್‌ ಪೊಲೀಸ್‌ ಠಾಣೆ ಕಾ‍ರ್ಯ ನಿ‍ರ್ವಹಿಸುತ್ತವೆ.

ಕರ್ನಾಟಕ ರಾಜ್ಯ ಮೀಸಲು ಪಡೆ :

ಈ ವಿಭಾಗದ ನೇತೃತ್ವವನ್ನು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ವಹಿಸಿಕೊಂಡಿರುತ್ತಾರೆ.  ಇವರ ಸಹಾಯಕ್ಕೆ ರಾಜ್ಯ ಮೀಸಲು ಪಡೆಯಲ್ಲಿ ಒಬ್ಬರು ಪೊಲೀಸ್‌ ಮಹಾನಿರೀಕ್ಷಕರು ಮತ್ತು ಇಬ್ಬರು ಉಪ  ಪೊಲೀಸ್‌ ಮಹಾ ನಿರೀಕ್ಷಕರು ಇರುತ್ತಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಮೀಸಲು ಪಡೆಯಲ್ಲಿ 12 ಬೆಟಾಲಿಯನ್‌ಗಳು ಇರುತ್ತವೆ. ಅವುಗಳಲ್ಲಿ 4 ಬೆಟಾಲಿಯನ್‌ಗಳು ಬೆಂಗಳೂರಿನಲ್ಲೂ ಹಾಗೂ ಉಳಿದ 8 ಬೆಟಾಲಿಯನ್‌ಗಳು ಮೈಸೂರು, ಬೆಳಗಾವಿ, ಕಲ್ಬುರ್ಗಿ, ಮಂಗಳೂರು, ಶಿವಮೊಗ್ಗ, ಶಿಗ್ಗಾಂವ್‌, ತುಮಕೂರು ಮತ್ತು ಹಾಸನದಲ್ಲಿ ಇರುತ್ತದೆ.

ಸಂವಹನ, ಲಾಜಿಸ್ಟಿಕ್ಮತ್ತು ಆಧುನೀಕರಣ ವಿಭಾಗ :

ಈ ವಿಭಾಗದ ನೇತೃತ್ವವನ್ನು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ವಹಿಸಿರುತ್ತಾರೆ. ಈ ವಿಭಾಗದ ಪೊಲೀಸ್‌ ನಿಸ್ತಂತು ವಿಭಾಗ ಮತ್ತು ಮೋಟಾರು ಸಾರಿಗೆ ಸಂಸ್ಥೆಯ  ನೇತೃತ್ವವನ್ನು ಪೊಲೀಸ್‌ ಅಧೀಕ್ಷಕರು ವಹಿಸಿಕೊಂಡಿರುತ್ತಾರೆ.

ಪೊಲೀಸ್ತರಬೇತಿ :

ಈ ವಿಭಾಗದ ನಿರ್ದೇಶಕರು ಪೊಲೀಸ್‌ ಮಹಾನಿರ್ದೇಶಕರು ತರಬೇತಿ ರವರಾಗಿರುತ್ತಾರೆ. ಅವರ  ಸಹಾಯಕರಾಗಿ ಪೊಲೀಸ್‌ ಮಹಾನಿರೀಕ್ಷಕರು ಮತ್ತು ಉಪ ಪೊಲೀಸ್‌ ಮಹಾನಿರೀಕ್ಷಕರು ಇರುತ್ತಾರೆ.

ರಾಜ್ಯವು ಈ ಕೆಳಗಿನ ತರಬೇತಿ ಸಂಸ್ಥೆಗಳನ್ನು ಹೊಂದಿರುತ್ತದೆ.

ಕ್ರಮ ಸಂಖ್ಯೆ ತರಬೇತಿ ಸಂಸ್ಥೆಯ ಹೆಸರು
1 ಕೆ.ಪಿ.ಎ, ಮೈಸೂರು 
2 ಪಿಟಿಸಿ, ಕಲಬುರಗಿ 
3 ಕೆಎಸ್ಪಿಟಿಎಸ್, ಚನ್ನಪಟ್ಟಣ
4 ಪಿಟಿಎಸ್, ಖಾನಾಪುರ
5 ಎ.ಪಿ.ಟಿ.ಎಸ್, ಯಲಹಂಕ
6 ಪಿಡಿಎಮ್ಎಸ್, ಯಲಹಂಕ
7 ಪಿಟಿಎಸ್, ಧಾರವಾಢ
8 ಪಿಟಿಎಸ್, ಮೈಸೂರು
9 ಪಿಟಿಎಸ್, ಹಾಸನ
10 ಪಿಟಿಎಸ್ ಐಮಂಗಲ, ಚಿತ್ರದುರ್ಗ
11 ಪಿಟಿಎಸ್ ಕಡೂರು, ಚಿಕ್ಕಮಗಳೂರು
12 ಪಿಟಿಎಸ್ ಥಣಿಸಂದ್ರ, ಬೆಂಗಳೂರು
13 ಐ ಆರ್ ಬಿ, ಮುನಿರಾಬಾದ್
14 ಕರ್ನಾಟಕ ಪೊಲೀಸ್ ವೈರ್ ಲೆಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್
15 ಸ್ಪೆಷಲ್ ಬ್ರಾಂಚ್ ಟ್ರೈನಿಂಗ್ ಇನ್ಸ್ಟಿಟ್ಯೂಟ್
16 ಟ್ರಾಫಿಕ್ ಟ್ರೈನಿಂಗ್ ಇನ್ಸ್ಟಿಟ್ಯೂಟ್


ನಾಗರೀಕ
ಹಕ್ಕುಗಳ ಜಾರಿ ನಿರ್ದೇಶನಾಲಯ :

ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದಾರೆ.  ಇವರ ಸಹಾಯಕರಾಗಿ  ಪೊಲೀಸ್‌ ಮಹಾನಿರೀಕ್ಷಕರು, ಉಪ ಪೊಲೀಸ್‌ ಮಹಾನಿರೀಕ್ಷಕರು ಮತ್ತು ಪೊಲೀಸ್‌ ಅಧೀಕ್ಷಕರು ಮುಖ್ಯ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈ ವಿಭಾಗದ ಅಡಿಯಲ್ಲಿ ಬೆಂಗಳೂರು, ಮಂಗಳೂರು, ದಾವಣೆಗೆರೆ, ಬೆಳಗಾವಿ, ಕಲ್ಬುರ್ಗಿ ಮತ್ತು ಮೈಸೂರಿನಲ್ಲಿ 6 ಘಟಕಗಳಿದ್ದು ಪ್ರತಿಯೊಂದು ಘಟಕಕ್ಕೂ ಪೊಲೀಸ್‌ ಅಧೀಕ್ಷಕರ ದರ್ಜೆಯ ಅಧಿಕಾರಿಗಳು ನೇತೃತ್ವ ವಹಿಸಿರುತ್ತಾರೆ.

ನಾಗರೀಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1955 ಮತ್ತು (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾದ ಪ್ರಕರಣಗಳ ನೊಂದಣಿ ಮತ್ತು ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತದೆ.  ಹಾಗೂ ಸಾಮಾನ್ಯವಾಗಿ ಎಸ್‌ಸಿ/ಎಸ್‌ಟಿ ಗಳಿಗೆ ವಿಸ್ತರಿಸಿದ ಹಕ್ಕುಗಳು ಮತ್ತು ಪ್ರಯೋಜನಗಳ ಕಾವಲುಗಾರನಾಗಿ ಕಾರ್ಯ ನಿರ್ವಹಿಸುತ್ತದೆ. ಎಸ್‌ಸಿ-ಎಸ್‌ಟಿ ರವರುಗಳಿಗೆ ಇರುವ ಸೌಲಭ್ಯಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುವವರ ಮೇಲೆ ನಿಗಾ ವಹಿಸಲಾಗುತ್ತದೆ.

ಯೋಜನೆ ಮತ್ತು ಆಧುನೀಕರಣ :

ಈ ವಿಭಾಗಕ್ಕೆ ಪೊಲೀಸ್‌ ಮಹಾನಿರೀಕ್ಷಕ ದರ್ಜೆಯ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಪೊಲೀಸ್‌ ಇಲಾಖೆಯ ಹೊಸ ಯೋಜನೆ ಹಾಗೂ ಆಧುನೀಕರಣಕ್ಕೆ ಹೊಸ ಪ್ರಸ್ತಾವನೆಗಳನ್ನು ಈ ವಿಭಾಗದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ.

ಪೊಲೀಸ್ವಸತಿ ಹಾಗೂ ಪೊಲೀಸ್ಕಲ್ಯಾಣ :

ಈ ವಿಭಾಗಕ್ಕೆ ಪೊಲೀಸ್‌ ಮಹಾನಿರೀಕ್ಷಕ ದರ್ಜೆಯ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಕರ್ನಾಟಕ ರಾಜ್ಯ ಪೊಲೀಸ್‌  ವಸತಿ ಮತ್ತು ಮೂಲಭೂತ ಸೌಲಭ್ಯ  ಅಭಿವೃದ್ದಿ ನಿಗಮವಿದ್ದು, ಪೊಲೀಸ್‌ ಸಮೂದಾಯದೊಂದಿಗೆ ಉತ್ತಮ ಬಾಂಧವ್ಯಕ್ಕಾಗಿ ವಿನೂತನ ರೀತಿಯ ಕಟ್ಟಡಗಳ ನಿರ್ಮಾಣವು ಪೊಲೀಸ್‌ ವಸತಿಯ ಮೂಲ ಉದ್ದೇಶವಾಗಿದೆ.

ಕರ್ನಾಟಕ ರಾಜ್ಯದಲ್ಲಿ ಪೊಲೀಸ್‌ ಕಲ್ಯಾಣ ವಿಭಾಗದಲ್ಲಿ ಈ ಕೆಳಗಿನ ಕ್ಷೇಮ ಚಟುವಟಿಕೆಗಳು ನಡೆಯತ್ತಿವೆ.

 1. ಪೊಲೀಸ್‌ ಕಲ್ಯಾಣ ಮಂಟಪಗಳು
 2. ಪೊಲೀಸ್‌ ಸಬ್ಸಿಡಯಿರಿ ಕ್ಯಾಂಟಿನ್‌ಗಳು
 3. ಪೊಲೀಸ್‌ ವಸತಿ ಶಾಲೆಗಳು
 4. ಲಾಭದಾಯಕ ನಿಧಿ-ಶಿಕ್ಷಣ ನೆರವು (ಬೆನ್ವಲಪ್‌ ಫಂಡ್)
 5. ನಿವೃತ್ತ ಪೊಲೀಸ್‌ ಅಧಿಕಾರಿಗಳ ಆರೋಗ್ಯ ಟ್ರಸ್ಟ್‌
 6. ಆರೋಗ್ಯ ಭಾಗ್ಯ ಯೋಜನೆ…

ಆಂತರಿಕ ಭದ್ರತಾ ವಿಭಾಗ :

ಆಂತರಿಕ ಭದ್ರತಾ ವಿಭಾಗವನ್ನು ಆರ್ಡರ್‌ ನಂ ಎಚ್‌,ಡಿ-208-ಪಿಒಪಿ-2008 ದಿನಾಂಕ: 12-12-2008  ರಂದು ಕರ್ನಾಟಕ ಸರ್ಕಾರವು ಪ್ರಾರಂಭಿಸಿದೆ.  ಈ ವಿಭಾಗವನ್ನು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರು ವಹಿಸಿರುತ್ತಾರೆ. ಆಂತರಿಕ ಭದ್ರತಾ ಆಯಾಮವನ್ನು ಹೊಂದಿರುವ ಭಯೋತ್ಪಾದಕ ಚಟುವಟಿಕೆ, ಹವಾಲಾ, ಎಫ್‌.ಐ.ಸಿ.ಎನ್, ನಾರ್ಕೊ ಭಯೋತ್ಪಾದನೆ, ಸಂಘಟಿತ ಅಪರಾಧಗಳಂತಹ ರಾಷ್ಟೀಯ ವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳ ಮೇಲೆ ಗುಪ್ತಚರ ಮಾಹಿತಿ ಸಂಗ್ರಹಿಸುವುದು ಈ ವಿಶೇಷ ಘಟಕದ ಕರ್ತವ್ಯವಾಗಿರುತ್ತದೆ.

ಆಂತರಿಕ ಭದ್ರತಾ ವಿಭಾಗವು ಈ ಕೆಳಗಿನ ಘಟಕಗಳನ್ನು ಹೊಂದಿರುತ್ತದೆ.

 1. ಕರಾವಳಿ ಭದ್ರತಾ ಪಡೆ.‌
 2. ನಕ್ಸಲ್‌ ನಿಗ್ರಹ ದಳ.‌
 3. ಭಯೋತ್ಪಾದನಾ ನಿಗ್ರಹ ತಂಡ
 4. ಭಯೋತ್ಪಾದನಾ ನಿಗ್ರಹ ಕೇಂದ್ರ.
 5. ಖಾಸಗಿ ಭದ್ರತೆಯ ನಿಯಂತ್ರಣ.
 6. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌)

ಇತ್ತೀಚಿನ ನವೀಕರಣ​ : 23-07-2021 03:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ