ಅಭಿಪ್ರಾಯ / ಸಲಹೆಗಳು

ಮಹಿಳೆ ಮತ್ತು ಮಕ್ಕಳು

ಮಹಿಳೆಯರು ಮತ್ತು ಮಕ್ಕಳು ತುರ್ತಾಗಿ ಪೊಲೀಸ್ ಸಹಾಯ ಬಯಸಿದಲ್ಲಿ ಡಯಲ್ ೧೧೨ ಸಂಖ್ಯೆಗೆ ಪೋನ್ ಮಾಡುವ ಮುಖಾಂತರ ವಿವರಗಳನ್ನು ತಿಳಿಸಿ ಸಹಾಯ ಪಡೆದುಕೊಳ್ಳಬಹುದು.

ಯಾವುದೇ ಮಹಿಳೆ ಅಥವಾ ಮಕ್ಕಳು ಆರೋಪಿಯಲ್ಲದಿದ್ದಲ್ಲಿ ಪೊಲೀಸ್ ಠಾಣೆಗಳಿಗೆ ಪೊಲೀಸ್ ವಿಚಾರಣೆ ನಡೆಸಲು ಕರೆಸುವಂತಿಲ್ಲ. ಒಂದು ವೇಳೆ ಪೊಲೀಸರು ವಿಚಾರಣೆ ನಡೆಸ ಬೇಕಾಗಿದ್ದಲ್ಲಿ ಸಂಬಂಧಪಟ್ಟವರ ಮನೆಗೆ ಹೋಗಿ ಅಲ್ಲಿ ವಿಚಾರಣೆ ನಡೆಸಬೇಕಾಗಿರುತ್ತದೆ. ಯಾವುದೇ ಮಹಿಳೆ ಅಥವಾ ಬಾಲಕಿಯನ್ನು ಪ್ರಶ್ನಿಸಬೇಕಾಗಿದ್ದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಅವಶ್ಯಕತೆ ಇರುತ್ತದೆ.

ಯಾವುದೇ ಒಂದು ಮಗು ಅಪರಾಧಗಳಲ್ಲಿ ಬಾಗಿಯಾದಾಗ ಬಾಲ ನ್ಯಾಯಿಕ ಕಾಯಿದೆ ಯಡಿಯಲ್ಲಿರುವ ಪ್ರಕ್ರಿಯೆಯಂತೆ ಕ್ರಮ ಕೈಗೊಳ್ಳಲಾಗುವುದು.

ಯಾವುದೇ ಮಹಿಳೆ ಅವರು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ದೂರುಗಳಿದ್ದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ತೆರಳಿ “ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ಪ್ರತಿಬಂಧ, ನಿವಾರಣೆ & ಪರಿಹಾರ) ಕಾಯಿದೆ ಮತ್ತು ಅಧಿನಿಯಮ ೨೦೧೩ ರಡಿಯಲ್ಲಿ ದೂರು ಸಲ್ಲಿಸುವ ಮುಖಾಂತರ ಪರಿಹಾರ ಪಡೆದುಕೊಳ್ಳಬಹುದು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ೨೦೧೨ ರ ಅಡಿಯಲ್ಲಿ ರಕ್ಷಣೆ ಇರುತ್ತದೆ.

 

ಇತ್ತೀಚಿನ ನವೀಕರಣ​ : 03-08-2021 04:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080