ಅಭಿಪ್ರಾಯ / ಸಲಹೆಗಳು

ಬಹುಮಾನಗಳು

ಪೊಲೀಸ್‌ ಇಲಾಖೆಯಿಂದ ನೀಡುವ ಬಹುಮಾನಗಳ ವಿವರ:-

ನಗದು ಬಹುಮಾನ

343 ನೇ ಆದೇಶದಲ್ಲಿ ನಮೂದಿಸಿರುವ ಅಧಿಕಾರಿಗಳ ವ್ಯಾಪ್ತಿಯೊಳಗೆ ವಿಶೇಷ ಅರ್ಹತೆಯ ಸೇವೆಗಳಿಗಾಗಿ ಪೊಲೀಸ್‌ ನಿರೀಕ್ಷಕರ ಶ್ರೇಣಿಯ ಮತ್ತು ಅದಕ್ಕೂ ಕೆಳ ದರ್ಜೆಯ ಪೊಲೀಸ್ ಅಧಿಕಾರಿಗಳಿಗೆ, ಮತ್ತು ಕೆ.ಎಸ್.ಆರ್.ಪಿ.ಯನ್ನೊಳಗೊಂಡು ತತ್ಸಮಾನ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಹಣದ ರೂಪದಲ್ಲಿ ಬಹುಮಾನಗಳನ್ನು ಕೊಡಬಹುದು. ಮಾಮೂಲಿ ಕೆಲಸಗಳಾದ ದಸ್ತಗಿರಿಯಾದನಂತರ ಒಪ್ಪಿಗೆ ಅಥವಾ ತಪ್ಪೊಪ್ಪಿಗೆ, ಉತ್ತಮ ಹಾಜರಾತಿ ಇತ್ಯಾದಿಗಳು ಯಾವುದೇ ರೀತಿಯ ವಿಶೇಷ ಕೌಶಲ್ಯವನ್ನು ತೋರದಂಥಹ ಅವರುಗಳು ಬಹುಮಾನಕ್ಕರ್ಹವಲ್ಲ.

ಇತರೆಯವರಿಂದ ನಗದು ಬಹುಮಾನ

ವರಿಷ್ಠ ಪೊಲೀಸ್ ಅಧಿಕಾರಿಗಳಲ್ಲದ, ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಕೆಳಗೆ ನಮೂದಿಸಿದ ಪ್ರಕರಣಗಳಲ್ಲಿ ನಗದು ಬಹುಮಾನ ಪಡೆಯಲು ಅರ್ಹರಿದ್ದಾರೆ.

1 ಸರ್ಕಾರ ಕೊಡುವ ಬಹುಮಾನಗಳು

2 ನ್ಯಾಯಾಲಯಗಳು ಕೊಡುವ ಬಹುಮಾನಗಳು

ಖಾಸಗೀ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು, ಅಥವಾ ಸರಕಾರದ ಇತರೆ ಇಲಾಖೆಗಳು, ಕೊಡಲ್ಪಡುವ ಬಹುಮಾನಗಳಾಗಿದ್ದು, ಅವುಗಳು ಕಮೀಷನರು, ಪೊಲೀಸ್ ಮಹಾನಿರೀಕ್ಷಕ/ಉಪ ಪೊಲೀಸ್ ಮಹಾನಿರೀಕ್ಷಕರು/ಅಧೀಕ್ಷಕರು ಆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರಿಗೆ ಮಂಜೂರು ಮಾಡಲು ಅಧಿಕಾರವಿದ್ದು, ಅವರ ಆದೇಶಗಳಿಗೆ ಒಳಪಟ್ಟು ಅವರು ಆ ಮೊತ್ತವು ಸಂಬಂಧಿಸಿದ ವ್ಯಕ್ತಿಗಳಿಗೆ ಅಥವಾ ಪೊಲೀಸ್ ನಿಧಿಗೆ ಅಥವಾ ಭಾಗಶ: ಎರಡಕ್ಕೂ ಕೊಡಬಹುದೆಂದು ನಿರ್ಧರಿಸತಕ್ಕಂಥವುಗಳು.

ಇತರೆ ಬಹುಮಾನಗಳು

ಪ್ರಮುಖವಾಗಿ ಉತ್ತಮ ಕೆಲಸದಿಂದ ವಿಶೇಷ ಗಮನಕ್ಕೆ ಅರ್ಹರಾದವರಿಗೆ, ಶ್ಲಾಘನೀಯ ಸೇವೆಯ ನಮೂದುಗಳು, ಎಂದು ನಮೂದಿಸುವ ಬಹುಮಾನವನ್ನು ಕೊಡಲಾಗುವುದು. ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾನಿರೀಕ್ಷಣಾಧಿಕಾರಿಯು ಕೊಡುವ ಈ ಬಹುಮಾನಗಳಿಗೆ, ಪೊಲೀಸ್ ನಿರೀಕ್ಷಕರ ಮತ್ತು ಅವರ ಸಮಾನ ಹುದ್ದೆಯಲ್ಲಿರುವ ಕೆ.ಎಸ್.ಆರ್.ಪಿ. ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳು ಮಾತ್ರ ಅರ್ಹರಾಗಿರುತ್ತಾರೆ.

ಶ್ಲಾಘನೀಯ ಸೇವೆ / ಉತ್ತಮ ಸೇವೆ ನಮೂದುಗಳು:

ಶ್ಲಾಘನೀಯ ಸೇವೆ ಮತ್ತು ಉತ್ತಮ ಸೇವೆ ನಮೂದುಗಳನ್ನು, ನಮೂನೆ 31ರಲ್ಲಿ ಕೊಡಲಾಗುತ್ತದೆ. ಅದರ ಒಂದು ನಕಲನ್ನು ಆ ಅಧಿಕಾರಿಯ ಖಾಸಗಿ ಕಡತದಲ್ಲಿಡತಕ್ಕದ್ದು, ಮತ್ತು ಆತನ ಸೇವಾ ರಿಜಿಸ್ಟರ್‌ನಲ್ಲಿ ನಮೂದಿಸುವುದು ಮತ್ತು ಮುಖ್ಯ ಪೇದೆಗಳ ಮತ್ತು ಪೊಲೀಸ್ ಪೇದೆಗಳ ಸಂಬಂಧವಾಗಿ ಅವರ ಗುಪ್ತ ವೈಯಕ್ತಿಕ ಹಾಳೆಯಲ್ಲಿ ದಾಖಲಿಸುವುದು.

ವರಿಷ್ಠ ಪೊಲೀಸ್ ಅಧಿಕಾರಿಗೆ ವಿಶಿಷ್ಠ ಅರ್ಹತೆಯ ಯಾವುದೇ ಕಾರ್ಯನಿರ್ವಹಣೆಯ ಸಂಕೇತವಾಗಿ ಪ್ರಶಂಸನಾ ಪತ್ರವನ್ನು ಕೊಡಬಹುದು. ಅಂಥ ಪತ್ರವನ್ನು ಅರೆ ಸರ್ಕಾರಿ ಪತ್ರದ ರೂಪದಲ್ಲಿ ಕೊಡಬೇಕು. ಹಾಗೂ ಮುಖ್ಯ ಕಾರ್ಯದರ್ಶಿ ಅಥವಾ ಒಳಾಡಳಿತ ಇಲಾಖಾ ಕಾರ್ಯದರ್ಶಿ ಅಥವಾ ಪೊಲೀಸ್ ಮಹಾನಿರ್ದೇಶಕರು ಅದಕ್ಕೆ ಸಹಿ ಮಾಡಬೇಕು. ಈ ಪತ್ರದ ಪ್ರತಿಯನ್ನು ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ವೈಯಕ್ತಿಕ ಕಡತದಲ್ಲಿ ದಾಖಲು ಮಾಡಬೇಕು.

ಇತರೆ ಇಲಾಖೆಯ ಸರ್ಕಾರಿ ಸೇವಕರಿಗೆ ಬಹುಮಾನಗಳು

ಯಾವುದಾದರೂ ಘೋರ ಅಪರಾಧದ ಪತ್ತೆಯಲ್ಲಿ, ಗಂಭೀರ ಪ್ರಕರಣದ ಪತ್ತೆಯಲ್ಲಿ, ಅಥವಾ ಆರೋಪಿಗಳನ್ನು ಹಿಡಿಯುವಲ್ಲಿ, ಪೊಲೀಸ್ ಅಧಿಕಾರಿಗಳಿಗೆ ಸಹಾಯ ಮಾಡಿದ ಇತರೆ ಇಲಾಖೆಯ ಸರಕಾರಿ ಅಧಿಕಾರಿಗಳಿಗೆ, ಉತ್ತೇಜನಕ್ಕಾಗಿ ಬಹುಮಾನಗಳನ್ನು ಕೊಡಬಹುದು. ಸಂಬಂಧಿಸಿದ ಇಲಾಖೆ ಮುಖ್ಯಸ್ಥರ ಮೂಲಕ ಬಹುಮಾನಗಳನ್ನು ಕೊಡತಕ್ಕದ್ದು.

ಖಾಸಗಿ ವ್ಯಕ್ತಿಗಳಿಗೆ ಬಹುಮಾನಗಳು

ಖಾಸಗಿ ವ್ಯಕ್ತಿಗಳಿಗೆ ಕೊಡುವ ಬಹುಮಾನಗಳು, ನಗದು ರೂಪದಲ್ಲಿ, ಅಥವಾ ಪಾರೊತೋಷಕ ರೂಪದಲ್ಲಿರಬಹುದು. ಖಾಸಗಿಯವರಿಗೆ ಪದಕಗಳನ್ನು ಬಹುಮಾನ ರೂಪದಲ್ಲಿ ಕೊಡತಕ್ಕದ್ದಲ್ಲ. ಆರೋಪಿಗಳನ್ನು ಬಂಧಿಸಿದ ಮತ್ತು ಅಪರಾಧ ಪತ್ತೆಗೆ ಮಾಹಿತಿ ನೀಡಿದ ಖಾಸಗಿ ವ್ಯಕ್ತಿಗಳಿಗೆ, ಬಹುಮಾನಗಳನ್ನು ಮಂಜೂರು ಮಾಡಬಹುದು.

ಖಾಸಗಿ ವ್ಯಕ್ತಿಗಳಿಗೆ ಪ್ರಮಾಣಪತ್ರ

(ಎ) ನಗದು ರೂಪದ ಬಹುಮಾನಗಳು ಉಚಿತವಲ್ಲದ ಸಂದರ್ಭಗಳಲ್ಲಿ, ಖಾಸಗಿ ವ್ಯಕ್ತಿಗಳು ಸೇವೆ ಮಾಡಿದ ಸ್ಮರಣೆಗೆ, ವಂದನೆಯ ಪತ್ರಗಳನ್ನು, ಅಥವಾ ಅವರ ಸೇವೆಯನ್ನು ಸ್ವೀಕರಿಸಿದ್ದಕ್ಕೆ ಸಮರ್ಥನಾ ಪತ್ರಗಳನ್ನು, ಪೊಲೀಸ್ ಅಧೀಕ್ಷಕ ಮತ್ತು ಆತನಿಗಿಂತ ಹಿರಿಯ ಶ್ರೇಣಿಯ ಅಧಿಕಾರಿಗಳು ಕೊಡಬಹುದು.

ಬಹುಮಾನಗಳು

ಖಾಸಗಿ ವ್ಯಕ್ತಿಗಳು ಪೊಲೀಸ್‌ ಇಲಾಖೆಗೆ ಅಸಾಮಾನ್ಯ ಸೇವೆ ಸಲ್ಲಿಸಲಾಗಿ ವಿಶೇಷ ರೀತಿಯ ಬಹುಮಾನಗಳನ್ನು, ಸಮಾರಂಭವನ್ನು ಆಯೋಜಿಸುವ ಮೂಲಕ ಕೋಡಲಾಗುವುದು. 

ಪ್ರಕಟಣೆ

ಸರಕಾರವು ಅಥವಾ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ಮಂಜೂರು ಮಾಡಿದ ಬಹುಮಾನಗಳನ್ನು, ಪೊಲೀಸ್ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗುವುದು. ಆಯುಕ್ತರು (ಕಮಿಷನರ್) ವಲಯ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಅಧೀಕ್ಷಕರು, ಮಂಜೂರು ಮಾಡಿದ ಬಹುಮಾನಗಳನ್ನು, ಅಪರಾಧ ಮತ್ತು ಘಟನೆಯ ಹಾಳೆಗಳಲ್ಲಿ ಪ್ರಕಟಿಸಲಾಗುವುದು.

ಇತ್ತೀಚಿನ ನವೀಕರಣ​ : 13-08-2021 12:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080