ಅಭಿಪ್ರಾಯ / ಸಲಹೆಗಳು

ಮಕ್ಕಳ ಮೇಲಿನ ದೌರ್ಜನ್ಯಗಳು

ಮಕ್ಕಳ ದುರುಪಯೋಗ :

ಮಗುವಿನ ದೈಹಿಕ ದುರುಪಯೋಗ ಎಂದರೆ ಮಗುವಿನ ಪೋಷಕರು ಅಥವಾ ಪೋಷಣೆಯ ಜವಾಬ್ದಾರಿ ಹೊತ್ತ ಯಾವುದೇ ವ್ಯಕ್ತಿ ಮಗುವಿಗೆ ಅಪಘಾತವಲ್ಲದ ಯಾವುದೇ ದೈಹಿಕ ಗಾಯವನ್ನುಂಟು ಮಾಡಿದಲ್ಲಿ ಅದನ್ನು ದೈಹಿಕ ದುರುಪಯೋಗ ಎನ್ನಲಾಗುತ್ತದೆ. 

ಮಕ್ಕಳ ಲೈಂಗಿಕ ದುರುಪಯೋಗ :

ಯಾವುದೇ ವಯಸ್ಕ ವ್ಯಕ್ತಿ ಮಗುವನ್ನು ಲೈಂಗಿಕ ಉದ್ದೇಶಕ್ಕಾಗಿ ಅಥವಾ ಲೈಂಗಿಕ ಕ್ರಿಯೆಯಲ್ಲಿ ಬಳಸಿಕೊಂಡಲ್ಲಿ ಅದು ಮಗುವಿನ ಲೈಂಗಿಕ ದುರುಪಯೋಗ ಎಂದೆನಿಸಿಕೊಳ್ಳುತ್ತದೆ. 

ಮಕ್ಕಳ ಭಾವನಾತ್ಮಕ ದುರುಪಯೋಗ :

ಮಗುವಿನ ಪೋಷಕರು ಅಥವಾ ಪೋಷಣೆಯ ಜವಾಬ್ದಾರಿ ಹೊತ್ತ ಯಾವುದೇ ವ್ಯಕ್ತಿ ಮಗುವಿನ ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯ ಕುರಿತಂತೆ ಭಾವನಾತ್ಮಕವಾಗಿ ಘಾಸಿ ಉಂಟು ಮಾಡಿದಲ್ಲಿ ಅದು ಮಕ್ಕಳ ಭಾವನಾತ್ಮಕ ದುರುಪಯೋಗ ಎನಿಸಿಕೊಳ್ಳುತ್ತದೆ. 

ಮಕ್ಖಳಿಗೆ ನೇರವಾಗಿ/ಅಂತರ್ಜಾಲದ ಮುಖಾಂತರ ಹೆದರಿಕೆ ಉಂಟುಮಾಡುವುದು :

ಯಾವುದೇ ವ್ಯಕ್ತಿಯು, ಚಿಕ್ಕ ಮಕ್ಕಳ  ಕುರತಾಗಿ ಅವರನ್ನು ಘಾಸಿಗೊಳಿಸುವ ಉದ್ದೇಶದಿಂದ ಮಕ್ಕಳನ್ನು ಗುರಿಯಾಗಿಸಿಕೊಂಡು ಬಲ, ಹೆದರಿಕೆ, ಚೇಡಿಸುವುದು, ಮುಜುಗರ ಉಂಟುಮಾಡಲು  ಪದೇಪದೇ ಆಕ್ರಮಣ ಶೀಲ ನಡವಳಿಕೆ ತೋರಿಸುವುದನ್ನು ಹಾಗೂ ಇಂತಹ ಕೃತ್ಯಗಳನ್ನು ಅಂತರ್ಜಾಲವನ್ನು ಉಪಯೋಗಿಸಿಕೊಂಡು ಈ-ಮೇಲ್‌, ಚಾಟಿಂಗ್‌ ಮೂಲಕ ಮಾಹಿತಿ ಕಳುಹಿಸುವ ವರ್ತನೆಗಳನ್ನು, ನೇರವಾಗಿ/ಅಂತರ್ಜಾಲದ ಮುಖಾಂತರ ಹೆದರಿಕೆ ಉಂಟುಮಾಡುವ ಕೃತ್ಯ ಎಂದು ಕರೆಯುತ್ತಾರೆ.

ಮಕ್ಕಳ ನಿರ್ಲಕ್ಷ್ಯ :

ಮಗುವಿನ ಪೋಷಕರು ಅಥವಾ ಪೋಷಣೆಯ ಜವಾಬ್ದಾರಿ ಹೊತ್ತ ಯಾವುದೇ ವ್ಯಕ್ತಿ ಮಗುವಿನ ಆರೋಗ್ಯ, ರಕ್ಷಣೆ ಮತ್ತು ಉತ್ತಮ ಜೀವನಕ್ಕೆ ಸಂಬಂಧಪಟ್ಟಂತೆ  ಸರಿಯಾದ ಹಾರೈಕೆ,  ಮೇಲ್ವಿಚಾರಣೆ, ಪ್ರೀತಿ,  ಹಾಗೂ ಬೆಂಬಲ ನೀಡದೇ ನಿರ್ಲಕ್ಷ್ಯತೆ ತೋರಿಸಿದರೆ ಅದನ್ನು ಮಕ್ಕಳ ನಿರ್ಲಕ್ಷ್ಯ ಎನ್ನುತ್ತಾರೆ. 

(೧) ದೈಹಿಕ ನಿರ್ಲಕ್ಷ್ಯ ಮತ್ತು ಮೇಲ್ವಿಚಾರಣೆ ಕೊರತೆ

(೨) ಭಾವನಾತ್ಮಕ ನಿರ್ಲಕ್ಷ್ಯ

(೩) ವೈದ್ಯಕೀಯ ನಿರ್ಲಕ್ಷ್ಯ

(೪) ಶೈಕ್ಷಣಿಕ ನಿರ್ಲಕ್ಷ್ಯ

ಇತ್ತೀಚಿನ ನವೀಕರಣ​ : 27-07-2021 01:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ