ಅಭಿಪ್ರಾಯ / ಸಲಹೆಗಳು

ಧ್ಯೇಯೋದ್ದೇಶಗಳು

  ಕರ್ನಾಟಕ ರಾಜ್ಯ ಪೊಲೀಸರಾದ ನಾವು ಸಾರ್ವಜನಿಕ ಹಕ್ಕುಗಳನ್ನು ರಕ್ಷಿಸಿ, ಕಾನೂನನ್ನು ಎತ್ತಿಹಿಡಿಯಲು ಪ್ರತಿಜ್ಞಾ ಬದ್ಧರಾಗಿದ್ದೇವೆ. ಇದನ್ನು ಸಾಧಿಸಲು ನಾವು ಈ ಕೆಳಗಿನ ಗುರಿಗಳನ್ನು ಮುಂದಿರಿಸಿಕೊಂಡಿದ್ದೇವೆ.

ಸಮಾಜ ವಿರೋಧಿ ಶಕ್ತಿಗಳಿಂದ ಜನರ ಪ್ರಾಣಗಳನ್ನು, ಹಕ್ಕುಗಳನ್ನು ರಕ್ಷಿಸಲು ಕಾನೂನಿನ ಪ್ರಕಾರ ಶ್ರಮಿಸುತ್ತೇವೆ. ಅಪರಾಧಿಗಳನ್ನು ಪತ್ತೆ ಹಚ್ಚುವುದರಲ್ಲಿ ಹಾಗೂ ಸಾರ್ವಜನಿಕ ನೆಮ್ಮದಿಯನ್ನು ಕಾಪಾಡುವುದರಲ್ಲಿ ಸಮಾಜದ ಸಹಕಾರವನ್ನು ಗಳಿಸಿಕೊಳ್ಳುತ್ತೇವೆ ಎಲ್ಲರಿಗೂ ವಿಳಂಬವಿಲ್ಲದೆ ನ್ಯಾಯ ದೊರಕುವಂತೆ ಮಾಡಲು ನ್ಯಾಯ ವ್ಯವಸ್ಥೆಯ ಇತರ ಎಲ್ಲಾ ಇಲಾಖೆಗಳೊಡನೆ ಸಹಕರಿಸುತ್ತೇವೆ. ಜಾತಿ, ಮತ ಮುಂತಾದ ಭೇದಗಳನ್ನು ರಾಜಕೀಯ, ಸಾಮಾಜಿಕ ಮುಂತಾದ ವ್ಯತ್ಯಾಸಗಳನ್ನೂ ಎಣಿಸದೆ ಎಲ್ಲಾ ನಾಗರೀಕರನ್ನು ಸಮಾನವಾಗಿ ನೋಡುತ್ತೇವೆ. ಸಮಾಜದ ದುರ್ಬಲ ವರ್ಗಗಳಿಗೆ, ವಯೋವೃದ್ಧರಿಗೆ, ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸಮುಚಿತವಾದ ಸೌಜನ್ಯವನ್ನೂ, ಉದಾರತೆಯನ್ನೂ ತೋರಿಸುತ್ತೇವೆ. ವೃತ್ತಿಪರ ಜ್ಞಾನವನ್ನೂ, ಕುಶಲತೆಯನ್ನೂ ಹೆಚ್ಚಿಸಿಕೊಳ್ಳಲು ಸತತವಾಗಿ ಶ್ರಮಿಸುತ್ತೇವೆ ಹಾಗೂ ಪೊಲೀಸ್ ಇಲಾಖೆಯ ಕೆಲಸದಲ್ಲಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುತ್ತೇವೆ. ಪ್ರಾಮಾಣಿಕತೆ, ನೇರನಡೆ ಹಾಗೂ ವೃತ್ತಿ ಮೌಲ್ಯಗಳನ್ನು ಕಾಪಾಡಿಕೊಂಡು ಬರುತ್ತೇವೆ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುತ್ತೇವೆ. ಸಾಮಾಜಿಕ ಬದಲಾವಣೆಯಲ್ಲಿ ನಮ್ಮ ಪಾತ್ರವನ್ನು ಒಪ್ಪಿಕೊಂಡು ಅದನ್ನು ಸರಿಯಾಗಿ ನಿರ್ವಹಿಸಿ, ಸಮಾಜದೊಳಗೆ ಜೀವನದ ಗುಣಮಟ್ಟದಲ್ಲಿ ಪ್ರಗತಿಯನ್ನು ಸಾಧಿಸುತ್ತೇವೆ.

 

ಇತ್ತೀಚಿನ ನವೀಕರಣ​ : 16-07-2021 04:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080