ಅಭಿಪ್ರಾಯ / ಸಲಹೆಗಳು

ಪ್ರಥಮ ವರ್ತಮಾನ ವರದಿಗಳು

ಪ್ರಥಮ ವರ್ತಮಾನ ವರದಿ:

ಯಾವುದೇ ಸಂಜ್ಞೇಯ   ಅಪರಾಧದ ಬಗ್ಗೆ,  ಪೊಲೀಸ್‌ ಠಾಣೆಯ ಉಸ್ತುವಾರಿಯನ್ನು ಹೊಂದಿರುವ ಅಧಿಕಾರಿ ದಾಖಲಿಸಿದ ಆರಂಭಿಕ ರೂಪ ಮತ್ತು ಮೊದಲ ಮಾಹಿತಿ ಪ್ರಥಮ ವರ್ತಮಾನ ವರದಿ.

ಸಂಜ್ಞೇಯ ಅಪರಾಧ :

ಪೊಲೀಸ್ ಅಧಿಕಾರಿಯು, ಮೊದಲನೇ ಅನುಸೂಚಿಗೆ ಅನುಗುಣವಾಗಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ವಿಧಿಯ ಮೇರೆಗೆ ವಾರಂಟು ಇಲ್ಲದೆ ದಸ್ತಗಿರಿ ಮಾಡಬಹುದಾದ ಅಪರಾಧ ಅಥವಾ ಮೊಕದ್ದಮೆ.

ಅಸಂಜ್ಞೇಯ ಅಪರಾಧ :

ಪೊಲೀಸ್ ಅಧಿಕಾರಿಯು ವಾರಂಟಿಲ್ಲದೆ, ದಸ್ತಗಿರಿ ಮಾಡುವ ಅಧಿಕಾರವನ್ನು ಹೊಂದಿರದ ಅಪರಾಧ ಪ್ರಕರಣ ಮೊಕದ್ದಮೆ ಆಗಿರುತ್ತದೆ.

ಪ್ರಥಮ ವರ್ತಮಾನ ವರದಿಯನ್ನು ದಾಖಲಿಸುವ ವಿಧಾನ:

ಸಂಜ್ಞೇಯ ಅಪರಾಧ ನಡೆದ ಬಗ್ಗೆ ತಿಳಿದಿರುವ ಯಾರಾದರೂ ಎಫ್ಐಆರ್ ದಾಖಲಿಸಬಹುದು. ಅಪರಾಧಕ್ಕೆ ಬಲಿಯಾದವರು ಮಾತ್ರ ಎಫ್‌ಐಆರ್ ಸಲ್ಲಿಸುವುದು ಅನಿವಾರ್ಯವಲ್ಲ. ಸಂಜ್ಞೇಯ ಅಪರಾಧದ ಬಗ್ಗೆ ತಿಳಿದುಕೊಂಡ ಪೊಲೀಸ್ ಅಧಿಕಾರಿ ಸ್ವತಃ ಎಫ್ಐಆರ್ ಸಲ್ಲಿಸಬಹುದು ಹಾಗೂ

  • ನಿಮ್ಮ ಮೇಲೆ ಅಪರಾಧ ಎಸಗಿದ್ದರೆ/ ಜರುಗಿದ್ದರೆ
  • ಅಪರಾಧ ನಡೆದ ಬಗ್ಗೆ ನಿಮಗೆ ತಿಳಿದಿದ್ದರೆ.
  • ಅಪರಾಧವನ್ನು ನಿಮ್ಮ ಕಣ್ಣಾರೆ ನೋಡಿದ್ದರೆ.

ತೊಂದರೆಗೆ/ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಅಥವಾ ಆತನ/ಆಕೆಯ ಪರವಾಗಿ ಯಾರಾದರೂ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಬಹುದು.

 ಎಫ್ಐಅರ್‌ ಸಲ್ಲಿಸುವ ವಿಧಾನ

ಎಫ್‌ಐಆರ್ ಸಲ್ಲಿಸುವ ವಿಧಾನವನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ 1973 ರ ಸೆಕ್ಷನ್ 154 ರಲ್ಲಿ ಸೂಚಿಸಲಾಗಿದೆ. ಸಂಜ್ಞೇಯ ಅಪರಾಧದ ಕೃತ್ಯದ ಬಗ್ಗೆ ಮಾಹಿತಿಯನ್ನು ಮೌಖಿಕವಾಗಿ ನೀಡಿದಾಗ, ಪೊಲೀಸರು ಅದನ್ನು ಬರೆಯಬೇಕು.

  • ಒಬ್ಬ ವ್ಯಕ್ತಿಯು ಮಾಹಿತಿಯನ್ನು ನೀಡುವುದು ಅಥವಾ ದೂರು ದಾಖಲಿಸುವುದು ಅವರ ಹಕ್ಕು. ಪೊಲೀಸರು ದಾಖಲಿಸಿದ ಮಾಹಿತಿಯನ್ನು ನಿಮಗೆ ಓದಬೇಕು.
  • ಮಾಹಿತಿಯನ್ನು ಪೊಲೀಸರು ದಾಖಲಿಸಿದ ನಂತರ ಮಾಹಿತಿಯನ್ನು ನೀಡುವ ವ್ಯಕ್ತಿಯ ಸಹಿ ಮಾಡಬೇಕು.
  • ಪೊಲೀಸರು ನೀಡಿದ ಮಾಹಿತಿಯು ನೀಡಿದ ವಿವರಗಳ ಪ್ರಕಾರ ಸರಿ ಎಂದು ಪರಿಶೀಲಿಸಿದ ನಂತರವೇ ನೀವು ವರದಿಗೆ ಸಹಿ ಹಾಕಬೇಕು.
  • ಓದಲು ಅಥವಾ ಬರೆಯಲು ಸಾಧ್ಯವಾಗದ ಜನರು ಇದು ಸರಿಯಾದ ದಾಖಲೆ ಎಂದು ಖಾತರಿಯಾದ ನಂತರ ತಮ್ಮ ಎಡ ಹೆಬ್ಬರಳಿನ ಗುರುತು ಹಾಕಬೇಕು.
  • ಎಫ್‌ಐಆರ್‌ ನಕಲನ್ನು ಯಾವಾಗಲೂ ಕೇಳಿ ಪಡೆಯಿರಿ. ಅದನ್ನು ಉಚಿತವಾಗಿ ಪಡೆಯುವುದು ನಿಮ್ಮ ಹಕ್ಕು.

ಎಫ್ಐಅರ್‌ನಲ್ಲಿ ನೀವು ಉಲ್ಲೇಖಿಸಬೇಕಾದ ಅಂಶ:

  • ನಿಮ್ಮ ಹೆಸರು ಮತ್ತು ವಿಳಾಸ.
  • ನೀವು ವರದಿ ಮಾಡುತ್ತಿರುವ ಘಟನೆಯ ದಿನಾಂಕ, ಸಮಯ ಮತ್ತು ಸ್ಥಳ
  • ಘಟನೆ ಸಂಭವಿಸಿದ ನಿಜವಾದ ಸಂಗತಿಗಳು
  • ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳ ಹೆಸರುಗಳು ಮತ್ತು ವಿವರಣೆಗಳು
  • ಸಾಕ್ಷಿಗಳು, ಯಾವುದಾದರೂ ಇದ್ದರೆ .

 

 

 

ಇತ್ತೀಚಿನ ನವೀಕರಣ​ : 19-07-2021 12:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080