ಅಭಿಪ್ರಾಯ / ಸಲಹೆಗಳು

ಅಪರಾಧಗಳು

ಸಂಜ್ಞೇಯ ಅಪರಾಧ

ಪೊಲೀಸ್ ಅಧಿಕಾರಿಯು, ಸಿ ಆರ್ ಪಿ ಸಿಯ ಮೊದಲನೇ ಅನುಸೂಚಿಗೆ ಅನುಗುಣವಾಗಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ವಿಧಿಯ ಮೇರೆಗೆ ವಾರಂಟು ಇಲ್ಲದೆ ದಸ್ತಗಿರಿಮಾಡಬಹುದಾದ ಅಪರಾಧ ಅಥವಾ ಮೊಕದ್ದಮೆ.

 

ಅಸಂಜ್ಞೇಯ ಅಪರಾಧ

ಪೊಲೀಸ್ ಅಧಿಕಾರಿಯು ವಾರಂಟಿಲ್ಲದೆ, ದಸ್ತಗಿರಿ ಮಾಡುವ ಅಧಿಕಾರವನ್ನು ಹೊಂದಿರದ ಅಪರಾಧ.

 

ಜಾಮಿನೀಯ ಅಪರಾಧ

ಸಿ ಆರ್ ಪಿ ಸಿಯ  ಮೊದಲ ಶೆಡ್ಯೂಲ್‌ (1ನೇ ಅನುಸೂಚಿಯಲ್ಲಿ) ನಲ್ಲಿ ಜಾಮೀನಿಯ ಎಂದು ತೋರಿಸಿರುವ ಅಪರಾಧ ಅಥವಾ ಚಾಲ್ತಿಯಲ್ಲಿರುವ ಯಾವುದೇ ಕಾಯಿದೆಯಲ್ಲಿ ಜಾಮೀನೀಯ ಎಂದು ತಿಳಿಸಿರುವ ಅಪರಾಧ.

 

ಜಾಮೀನು ರಹಿತ ಅಪರಾಧ

ಜಾಮೀನು ರಹಿತ ಅಪರಾಧವು  ಸಿ ಆರ್ ಪಿ ಸಿಯ 1ನೇ ಅನುಸೂಚಿಯಲ್ಲಿ ಜಾಮೀನಿಯ ಅಪರಾಧದಲ್ಲಿ ಸೇರಿಸದ ಎಲ್ಲ ಅಪರಾಧಗಳನ್ನು ಒಳಗೊಂಡಿದೆ. ಇದಲ್ಲದೆ, ಅದರ ಎರಡನೇ ಭಾಗದಲ್ಲಿನ ಮೊದಲ ಶೆಡ್ಯೂಲ್‌ ನಲ್ಲಿ ಜಾಮೀನು ರಹಿತ ಅಪರಾಧವನ್ನು ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸುವ ಅಪರಾಧಗಳು ಎಂದು ವ್ಯಾಖ್ಯಾನಿಸಿದೆ.

 

ಮುಂಜಾಗ್ರತಾ ದಸ್ತಗಿರಿ

ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 (ಸಿಆರ್ಪಿಸಿ) ಯ ಸೆಕ್ಷನ್ 151 ರ ಅಡಿಯಲ್ಲಿ ಮುಂಜಾಗ್ರತಾ ದಸ್ತಗಿರಿಯು  ಸಂಬಂಧಪಟ್ಟ ವ್ಯಕ್ತಿಯಿಂದ ಕೆಲವು ತಪ್ಪು ಕ್ರಮಗಳನ್ನು ಮಾಡಬಹುದೆಂಬ ಅನುಮಾನದ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ.  ಪೋಲಿಸ್‌ ಅಧಿಕಾರಿಯು  ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ಮತ್ತು ಯಾವುದೇ ವಾರಂಟ್ ಇಲ್ಲದೆ ಒಬ್ಬ ವ್ಯಕ್ತಿಯನ್ನು ಬಂಧಿಸಬಹುದಾಗಿದೆ.

ಭಾರತೀಯ ಸಂವಿಧಾನದ 22 ನೇ ವಿಧಿಯು ಕೆಲವು ಪ್ರಕರಣಗಳಲ್ಲಿ ಬಂಧನ ಮತ್ತು ಬಂಧನದ ವಿರುದ್ಧ ರಕ್ಷಣೆ ನೀಡುತ್ತದೆ.

 

ಇತ್ತೀಚಿನ ನವೀಕರಣ​ : 19-07-2021 12:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080