ಅಭಿಪ್ರಾಯ / ಸಲಹೆಗಳು

ಸೈಬರ್ ಕ್ರೈಂ

ಯಾವುದೇ ಒಂದು ಕಂಪ್ಯೂಟರ್ ಉಪಕರಣವನ್ನು ಮಾದ್ಯಮವಾಗಿ, ಗುರಿಯಾಗಿಸಿ ಬಳಸಿಕೊಂಡು ಆ ಮೂಲಕ ಎಸಗುವ ಮತ್ತು ತನ್ಮೂಲಕ ಉಂಟಾಗುವ ಎಲ್ಲಾ ರೀತಿಯ ಅಪರಾಧಿಕ ಕೃತ್ಯಗಳನ್ನು ಸೈಬರ್ ಅಪರಾಧಗಳು ಎನ್ನುತ್ತಾರೆ.

ಸೈಬರ್ ಅಪರಾಧಗಳನ್ನು ಮೂರು ಮುಖ್ಯ ವಿಭಾಗಗಳಾಗಿ ವರ್ಗೀಕರಿಸಬಹುದಾಗಿದ್ದು, ಅವುಗಳಾವುವೆಂದರೆ,

• ಸರ್ಕಾರದ ವಿರುದ್ದ ಮಾಡಲಾದ ಸೈಬರ್ ಅಪರಾಧಗಳು (ಸೈಬರ್ ಭಯೋತ್ಪಾದನೆ)

• ವ್ಯಕ್ತಿಗಳ ವಿರುದ್ದ ಮಾಡಲಾಗುವ ಸೈಬರ್ ಅಪರಾಧಗಳು (ಅಶ್ಲೀಲ ಚಿತ್ರ ಪ್ರದರ್ಶನ, ಸೈಬರ್ ಸ್ಟಾಲ್ಕಿಂಗ್, ಸೈಬರ್ ಮಾನಹಾನಿ)

• ಸ್ವತ್ತುಗಳ ವಿರುದ್ದ ಮಾಡಲಾಗುವ ಅಪರಾಧಗಳು (ಆನ್ಲೈನ್ ಜೂಜು, ಬೌದ್ದಿಕ ಸ್ವತ್ತಿನಹಕ್ಕು ಅತಿಕ್ರಮ, ಕ್ರೆಡಿಟ್ ಕಾರ್ಡ್ ವಂಚನೆ)

ಸೈಬರ್ ಅಪರಾಧಗಳನ್ನು ಹಲವು ವಿಧಗಳಲ್ಲಿ ಎಸಗಲಾಗುತ್ತದೆ, ಕೆಲವು ಅಪರಾಧಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.

• ಗಣಕ ಯಂತ್ರಗಳು ಅಥವಾ ನೆಟ್ವರ್ಕ್ ವ್ಯವಸ್ಥೆಗೆ ಅನಧಿಕೃತವಾಗಿ ಪ್ರವೇಶ ಪಡೆಯುವುದು/ಹ್ಯಾಕಿಂಗ್

• ವಿದ್ಯುನ್ಮಾನ ಮಾದ್ಯಮದಲ್ಲಿ ಸಂರಕ್ಷಿಸಲಾದ ದತ್ತಾಂಶ ಮಾಹಿತಿಯನ್ನು ಕಳುವು ಮಾಡುವುದು.

• ಈ-ಮೇಲ್ ಬಾಂಬಿಂಗ್,

• ದತ್ತಾಂಶವನ್ನು ಮೋಸದಿಂದ ಬದಲಾಯಿಸುವುದು.

• ಫಿಶಿಂಗ್

• ಸಲಾಮಿ ಅಟ್ಯಾಕ್

• ವೈರಸ್/ವರ್ಮ್ ಅಟ್ಯಾಕ್

• ಲಾಜಿಕ್ ಬಾಂಬ್ಸ್

• ಇಂಟರ್ನೆಟ್ ಟೈಮ್ ಕಳುವು.

ವಿದ್ಯುನ್ಮಾನ ಸಂಪರ್ಕ ವ್ಯವಸ್ಥೆಯಲ್ಲಿ ಲಭ್ಯವಾಗುವ, ಯೂಸರ್ ನೇಮ್ಸ್ಗಳು, ಪಾಸ್ವರ್ಡ್ಗಳು ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು, ಅಪರಾಧಿಕ ಮತ್ತು ಮೋಸದ ಕೃತ್ಯಗಳ ಮೂಲಕ ನೈಜ ಮತ್ತು ನಂಬಿಕಾರ್ಹ ವ್ಯಕ್ತಿ ಎಂದು ತೋರ್ಪಡಿಸಿಕೊಳ್ಳುವ ಮೂಲಕ ಮಾಹಿತಿಗಳನ್ನು ಕದಿಯುವ ಕೃತ್ಯಕ್ಕೆ ಫಿಶಿಂಗ್ ಎನ್ನುತ್ತಾರೆ.

ಸುಲಭವಾಗಿ ಹಣವನ್ನು ಸಂಪಾದನೆ ಮಾಡಲು ಅಪರಾಧಿಗಳು ಬೇರೆ ವಿವಿಧ ಹೆಸರಾಂತ ಟ್ರೇಡ್ ಮಾರ್ಕ್, ಬಿಸಿನೆಸ್ ನೇಮ್ಸ್, ಸರ್ವೀಸ್ ಮಾರ್ಕ್ ಗಳನ್ನು ತಮ್ಮದೇ ಎಂದು ಡೊಮೈನ್ ನೇಮ್ ಆಗಿ ನೊಂದಣಿ ಮಾಡಿಸಿ ಅದನ್ನು ತಮ್ಮ ಬಳಿ ಹಿಡಿದಿಟ್ಟುಕೊಂಡು ನಂತರ ಬೇರೆ ವ್ಯಕ್ತಿಗಳಿಗೆ ಆ ಡೊಮೈನ್ ನೇಮ್ಗಳನ್ನು ಹೆಚ್ಚಿನ ಹಣ ಪಡೆದು ಮಾರಾಟ ಮಾಡುವಂತಹ ಕೃತ್ಯಕ್ಕೆ ಸೈಬರ್ ಸ್ಕ್ವಾಟಿಂಗ್ ಎಂದು ಕರೆಯುತ್ತಾರೆ.

ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯಿದೆ ಪ್ರಕಾರ ಯಾವುದೇ ಒಂದು ಸೈಬರ್ ಅಪರಾಧಕ್ಕೆ ಸಂಬಂಧಿಸಿದ ದೂರನ್ನು ನೀವು ವಾಸ ಮಾಡುವ ನಗರದ ಅಥವಾ ಇನ್ನಿತರ ಯಾವುದೇ ಪ್ರದೇಶದಲ್ಲಿರುವ ಸೈಬರ್ ಸೆಲ್/ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಬಹುದಾಗಿದೆ, ಆದಾಗ್ಯೂ ನಿಮ್ಮ ವಿಳಾಸದ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವುದು ಉತ್ತಮ.

ಯಾವುದೇ ಗಣಕ ಯಂತ್ರ/ಅಂತರ್ಜಾಲ ವ್ಯವಸ್ಥೆಯನ್ನು ಬಳಸಿಕೊಂಡು ವ್ಯಕ್ತಿ/ಸಂಸ್ಥೆಯ ಮಾನಹಾನಿ ಉಂಟು ಮಾಡುವ ಕೃತ್ಯಗಳು ನಡೆದರೆ, ಅದು ಸೈಬರ್ ಮಾನಹಾನಿ ಎನಿಸಿಕೊಳ್ಳುತ್ತದೆ. ಉದಾ: ವೆಬ್ ಸೈಟ್ ಅಥವಾ ಈ-ಮೇಲ್ ಮುಖಾಂತರ ಕಳುಹಿಸುವ ಮಾನಹಾನಿ ಮಾಹಿತಿಗಳು ಇದರಡಿ ಬರುತ್ತವೆ.

ಯಾವುದೇ ಅಪರಾಧಿಯು ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಅಥವಾ ಹಣ ಗಳಿಸಿಕೊಳ್ಳುವ ದುರುದ್ದೇಶದಿಂದ ಬೇರೊಂದು ವ್ಯಕ್ತಿ/ಸಂಸ್ಥೆಯ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವ ಮುಖಾಂತರ ಅದರ ಹಿಡಿತ ಸಾಧಿಸುವ ಮತ್ತು ಅದರಲ್ಲಿರುವ ಮಾಹಿತಿಯನ್ನು ಬದಲಾಯಿಸುವ ಕೃತ್ಯಕ್ಕೆ ವೆಬ್ ಜ್ಯಾಕಿಂಗ್ ಎನ್ನುತ್ತಾರೆ.

ಹಣಕಾಸು ಅಪರಾಧಗಳನ್ನು ಮಾಡುವ ದೃಷ್ಟಿಯಿಂದ ಕೆಲವೊಂದು ಖಾತೆಗಳಿಂದ ಸಣ್ಣ ಮೊತ್ತದ ಹಣವನ್ನು ಖಾತೆದಾರರ ಗಮನಕ್ಕೆ ಬಾರದಂತೆ ಹೊರತೆಗೆದು, ಅದನ್ನು ಬೇರೊಂದು ಕಡೆ ಕ್ರೋಡೀಕರಿಸಿ ದೊಡ್ಡ ಮೊತ್ತ ಮಾಡಿಕೊಳ್ಳುವ ಕೃತ್ಯವನ್ನು ಸಲಾಮಿ ಅಟ್ಯಾಕ್ ಎನ್ನುತ್ತಾರೆ. ಇಂತಹ ಅಪರಾಧಗಳಲ್ಲಿ ಕಡಿಮೆ ಮೊತ್ತದ ಹಣ ವರ್ಗಾವಣೆಯಾಗುವುದರಿಂದ ಸಾರ್ವಜನಿಕರ ಗಮನಕ್ಕೆ ಇದು ಕಂಡು ಬರುವುದಿಲ್ಲ.

ಯಾವುದೇ ಒಬ್ಬ ವ್ಯಕ್ತಿಯನ್ನು ಅವನ/ಅವಳ ಇಚ್ಚೆಗೆ ವಿರುದ್ದವಾಗಿ ಹಿಂಬಾಲಿಸುವುದನ್ನು ಸ್ಟಾಲ್ಕಿಂಗ್ ಎಂದು ಕರೆಯುತ್ತಾರೆ, ಆ ಮೂಲಕ ಅಂತಹ ವ್ಯಕ್ತಿಗಳಿಗೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ತೊಂದರೆಗಳನ್ನು ನೀಡುವ ಉದ್ದೇಶದಿಂದ ಮಾಡುವಂತಹ ಕೃತ್ಯವಾಗಿರುತ್ತದೆ. ಇಂತಹ ಹಿಂಬಾಲಿಸುವಿಕೆಯನ್ನು ಅಂತರ್ಜಾಲವನ್ನು ಬಳಸಿಕೊಂಡು ವಿದ್ಯುನ್ಮಾನ ಯಂತ್ರಗಳ ಮುಖಾಂತರ ಮಾಡಿದರೆ ಅದನ್ನು ಸೈಬರ್ ಸ್ಟಾಲ್ಕಿಂಗ್ ಎಂದು ಕರೆಯುತ್ತಾರೆ.

ಅಂತರ್ಜಾಲ ವ್ಯವಸ್ಥೆಯನ್ನು ಬಳಸಿಕೊಂಡು ಭಯ ಉಂಟುಮಾಡಿ ಮತ್ತು ಹೆದರಿಸುವ ಮೂಲಕ, ರಾಜಕೀಯ ಅಥವಾ ಸೈದ್ದಾಂತಿಕ ವಿಚಾರಗಳನ್ನು ಈಡೇರಿಸಿಕೊಳ್ಳಲು ಜೀವಹಾನಿ ಮತ್ತು ದೈಹಿಕ ಹಿಂಸೆ ನೀಡುವಂತಹ ಕೃತ್ಯಗಳಲ್ಲಿ ತೊಡಗುವುದನ್ನು ಸೈಬರ್ ಭಯೋತ್ಪಾದನೆ ಎನ್ನುತ್ತಾರೆ.

• ಸೈಬರ್ ಹ್ಯಾಕರ್ಗಳು ನಿಮ್ಮ ವ್ಯಯಕ್ತಿಕ ಮಾಹಿತಿಗಳನ್ನು ಪಡೆಯಲು ಸೃಷ್ಟಿಸುವ ಫಿಶಿಂಗ್ ಸ್ಕ್ಯಾಮ್ಗಳ ಕುರಿತಾದ ತಾಜಾ ಮಾಹಿತಿಗಳನ್ನು ಓದಿ ಗಮನದಲ್ಲಿರಿಸಿಕೊಳ್ಳುವುದು.

• ನಿಮ್ಮ ಗಣಕ ಯಂತ್ರಕ್ಕೆ ಫೈರ್ವಾಲ್ ವ್ಯವಸ್ಥೆಯನ್ನು ಅಳವಡಿಸುವ ಮುಖಾಂತರ ನಿಮ್ಮ ಗಣಕ ಯಂತ್ರವನ್ನು ಸೈಬರ್ ದಾಳಿಗಳಿಂದ ಮುಕ್ತವಾಗಿರಿಸಿಕೊಳ್ಳಬಹುದು.

• ಈ ಮೇಲ್ಗಳನ್ನು ಮತ್ತು ಸೈಬರ್ ಲಿಂಕ್ಗಳನ್ನು ತೆರೆಯುವ ಮುನ್ನ ಎಚ್ಚರಿಕೆಯನ್ನು ವಹಿಸುವುದು ಸೂಕ್ತ, ಹಾಗೂ ಯಾವುದೇ ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ಮುನ್ನ ಅದರ ಮೂಲವನ್ನು ಎಚ್ಚರಿಕೆಯಿಂದ ಗಮನಿಸಿ ನಂತರ ಡೌನ್ ಲೋಡ್ ಪ್ರಕ್ರಿಯೆಯನ್ನು ಮುಂದುವರೆಸುವುದು ಸೂಕ್ತ.

• ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹೊಂದಿರುವ ವೆಬ್ಸೈಟ್ಗಳಿಗೆ ಹೆಚ್ಚು ಸುರಕ್ಷಿತವಾದ ಪಾಸ್ವರ್ಡ್ ಅನ್ನು ಸೃಜಿಸುವುದು ಸೂಕ್ತ.

ಇತ್ತೀಚಿನ ನವೀಕರಣ​ : 30-07-2021 11:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080