ಅಭಿಪ್ರಾಯ / ಸಲಹೆಗಳು

ಪದಕಗಳು

1.ರಾಷ್ಟ್ರಪತಿಗಳ ಪದಕಗಳು

1. ಎ) ಶೌರ್ಯ ಪದಕ

ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಗಳಲ್ಲಿ ಪೊಲೀಸ್‌ ಇಲಾಖೆಯಲ್ಲಿ ಪ್ರಮುಖ ಪ್ರಕರಣಗಳಲ್ಲಿ ಧೈರ್ಯ, ಅಪರಾಧಿಕ ಕೃತ್ಯ ಎಸಗಿದ ಶತೃಗಳನ್ನು ಹಿಡಿಯುವಲ್ಲಿ ತಮ್ಮ ಶೌರ್ಯ ಮತ್ತು ಆತ್ಮ ತ್ಯಾಗಕ್ಕಾಗಿ ಶ್ರಮಿಸಿದ ಪೊಲೀಸ್‌ ಅಧಿಕಾರಿಗಳಿಗೆ ನೀಡುವ ಗೌರವಯುತ ಪ್ರಶಸ್ತಿ ಶೌರ್ಯ ಪದಕವಾಗಿರುತ್ತದೆ. ಈ ಗೌರವಯುತ ಪ್ರಶಸ್ತಿ ಅಥವಾ ಪದಕವು ಭಾರತ ಸರ್ಕಾರ ಗೃಹ ವ್ಯವಹಾರಗಳ ಸಚಿವಾಲಯದ ಆದೇಶದ ಪ್ರಕಾರ ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ವಿಶೇಷ ಸಾಧನೆ ತೋರಿದ ಅಧಿಕಾರಿಯವರುಗಳಿಗೆ ಎರಡು ಬಾರಿ ಅಂದರೆ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಗಳಲ್ಲಿ ಶೌರ್ಯ ಪದಕ ಪ್ರಧಾನಕ್ಕಾಗಿ ಶಿಫಾರಸ್ಸು ಮಾಡಲಾಗುತ್ತದೆ. ಭಾರತ ಸರ್ಕಾರವು ಅಂತಿಮವಾಗಿ ಪದಕ ವಿಜೇತರ ಪಟ್ಟಿಯನ್ನು ಶಿಫಾರಸ್ಸು ಮಾಡುತ್ತದೆ.

1.ಬಿ) ವಿಶಿಷ್ಞ ಸೇವಾ ಪದಕ ಮತ್ತು ಶ್ಲಾಘನೀಯ ಸೇವೆಗಾಗಿ ಪೊಲೀಸ್ ಪದಕ:

ಪೊಲೀಸ್‌ ಇಲಾಖೆಯಲ್ಲಿ ವಿಶಿಷ್ಟ ಸೇವೆ ಮತ್ತು ಶ್ಲಾಘನೀಯ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವರ್ಷಕ್ಕೆ ಎರಡು ಭಾರಿ ಅಂದರೆ ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿಶಿಷ್ಟ ಸೇವಾಪದಕ ಮತ್ತು ಶ್ಲಾಘನೀಯ ಸೇವಾ ಪದಕವನ್ನು ನೀಡಲಾಗುತ್ತದೆ. ಕೇಂದ್ರ ಗೃಹ ಮಂತ್ರಾಲಯ ರವರ ಆದೇಶದಂತೆ ಆಯಾ ರಾಜ್ಯಗಳು ವರ್ಷಕ್ಕೆ ಎರಡು ಭಾರಿ ಅಂದರೆ ಗಣರಾಜ್ಯೋತ್ಸವ ಅಥವಾ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿಶಿಷ್ಟ ಸೇವೆ ಮತ್ತು ಶ್ಲಾಘನೀಯ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೇವೆಯನ್ನು ಸಲ್ಲಿಸಿದ ಅಧಿಕಾರಿಗಳ ಹೆಸರುಗಳನ್ನು ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಅಂತಿಮವಾಗಿ ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು ಪದಕ ವಿಜೇತರನ್ನು ಪ್ರಕಟಿಸುತ್ತದೆ.

2.ಜೀವ ರಕ್ಷಣೆಗಾಗಿ ಪ್ರಧಾನ ಮಂತ್ರಿಗಳ ಪದಕ :

ಮಾನವನ ಜೀವ ಉಳಿಸಲು ಆದರ್ಶಪ್ರಾಯವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್‌ ಅಧಿಕಾರಿ/ಸಿಬ್ಬಂದಿಗಳಿಗೆ ಪ್ರಧಾನಮಂತ್ರಿಗಳ ಜೀವರಕ್ಷಕ ಪದಕವನ್ನು ಬಹುಮಾನವಾಗಿ ನೀಡಲಾಗುವುದು. ಈ ಪದಕವನ್ನು ಅಖಿಲ ಭಾರತ ಪೊಲೀಸ್‌ ಕರ್ತವ್ಯ ಕೂಟ ಸಮಾರೋಪ ಸಮಾರಂಭ ದಿನದಂದು ವಿತರಿಸಲಾಗುತ್ತದೆ. ಕೇಂದ್ರ ಗೃಹ ಮಂತ್ರಾಲಯ ರವರ ಆದೇಶದಂತೆ ಆಯಾ ರಾಜ್ಯಗಳು ಅರ್ಹ ಅಧಿಕಾರಿ ಮತ್ತು ಸಿಬ್ಬಂದಿಗಳ ಹೆಸರುಗಳನ್ನು ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಅಂತಿಮವಾಗಿ ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು ಪದಕ ವಿಜೇತರನ್ನು ಪ್ರಕಟಿಸುತ್ತದೆ.

3.ಶ್ರೇಷ್ಠ ತನಿಖೆಗಾಗಿ ಕೇಂದ್ರ ಗೃಹ ಮಂತ್ರಿಗಳ ಪದಕ :

ಕೇಂದ್ರ ಹಾಗೂ ರಾಜ್ಯ ಪೊಲೀಸ್‌ ತನಿಖಾ ಏಜೆನ್ಸಿಗಳು ಮತ್ತು ಕೇಂದ್ರಾಡಳಿತ ತನಿಖಾ ಏಜೆನ್ಸಿಗಳು ನಿರ್ವಹಿಸಿದ ಮಹತ್ವ ಪ್ರಕರಣಗಳಲ್ಲಿ ತನಿಖೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿ ಆರೋಪಿತರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಗುರುತಿಸಿ ಶ್ರೇಷ್ಠ ತನಿಖೆಗಾಗಿ ಕೇಂದ್ರ ಗೃಹಮಂತ್ರಿಗಳ ಪದಕಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ನಂತರ ಕೇಂದ್ರ ಗೃಹ ಮಂತ್ರಾಲಯವು ಅಂತಿಮವಾಗಿ ಪದಕ ವಿಜೇತರನ್ನು ಪ್ರಕಟಿಸುತ್ತದೆ. ತನಿಖೆಯಲ್ಲಿ ಅತ್ಯುತ್ತಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುವುದು. ದೇಶದಲ್ಲಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್‌  ಇಲಾಖೆ ಮತ್ತು ಸಿ.ಐ.ಎ ವಿಭಾಗಗಳಲ್ಲಿ ಅಪರಾಧದ ತನಿಖೆಯ ಉನ್ನತ ವೃತ್ತಿಪರಮಾನದಂಡಗಳನ್ನು ಉತ್ತೇಜಿಸುವುದು.

4.ಕೇಂದ್ರ ಗೃಹ ಮಂತ್ರಿಯವರ ವಿಶಿಷ್ಠ ಕಾರ್ಯಾಚರಣೆ ಪದಕ:

ಇದು ಭಾರತ ಸರ್ಕಾರದ ಗೃಹ ಮಂತ್ರಾಲಯವು ಭಾರತದ ಸದಸ್ಯ ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳು, ಕೇಂದ್ರ ಪೊಲೀಸ್ ಸಂಸ್ಥೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಮತ್ತುರಕ್ಷಣಾ ಸಂಸ್ಥೆಗಳು, ದೇಶ/ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ರಕ್ಷಣೆಗಾಗಿ ಹಾಗೂ ಸಮಾಜದ ಬಹುಭಾಗಗಳ ರಕ್ಷಣೆಯಲ್ಲಿ ಮಹತ್ವದ ಪ್ರಭಾವ ಬೀರುವಂತಹಉನ್ನತ ಮಟ್ಟದಕಾರ್ಯಯೋಜನೆ ಹಾಗೂ ಹೆಚ್ಚಿನ ಮಹತ್ವವಿರುವ ವಿಶಿಷ್ಟ ಕಾರ್ಯಾಚರಣೆಯನ್ನು ಗುರುತಿಸಿ ನೀಡುವ ಪದಕವಾಗಿರುತ್ತದೆ. ಈ ಪ್ರಶಸ್ತಿಯು ಭಯೋತ್ಪಾದನೆ, ಗಡಿರಕ್ಷಣೆ, ಶಸ್ತ್ರಾಸ್ತ್ರ ನಿಯಂತ್ರಣ, ಮಾದಕವಸ್ತು, ಕಳ್ಳ ಸಾಕಾಣೆಯತಡೆ ಮತ್ತುರಕ್ಷಣಾ ಕಾರ್ಯಾಚರಣೆಗಳ ಕುರಿತಾಗಿ ನಡೆಸುವ ವಿಶಿಷ್ಠ ಕಾರ್ಯಾಚರಣೆಗಳನ್ನು ಒಳಗೊಂಡಿರುತ್ತದೆ.

5.ಮುಖ್ಯ ಮಂತ್ರಿಗಳ ಪದಕ :

ಪೊಲೀಸ್‌ ಇಲಾಖೆಯಲ್ಲಿ ಅಪರಾಧ ಪತ್ತೆ ಹಾಗೂ ಕಾನೂನು ‍ ‍& ಸುವ್ಯವಸ್ಥೆ ಕಾಪಾಡುವಲ್ಲಿ, ಸಾರ್ವಜನಿಕರ ಆಸ್ತಿ ಪಾಸ್ತಿ ಕಾಪಾಡುವಲ್ಲಿ ಹಾಗೂ ಉತ್ತಮ ಬಂದೋಬಸ್ತ್ ವ್ಯವಸ್ಥೆ ಆಯೋಜಿಸುವಲ್ಲಿ ಅಥವಾ ಕ್ರೀಡೆ ವಿಭಾಗದಲ್ಲಿ ಅಸಾಧಾರಣ ಕೌಶಲ್ಯ ಹಾಗೂ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಗುರುತಿಸಿ, ಪ್ರತಿ ವರ್ಷ ಏಪ್ರಿಲ್‌ 2ನೇ ತಾರೀಖಿನಂದು ಆಚರಿಸುವ ಪೊಲೀಸ್‌ ಧ್ವಜ ದಿನಾಚರಣೆಯಂದು ಮುಖ್ಯಮಂತ್ರಿಗಳ ಪದಕವನ್ನು ವಿತರಣೆ ಮಾಡಲಾಗುತ್ತದೆ. 

6.ಅತ್ಯುತ್ತಮ ಪೊಲೀಸ್‌ ತರಬೇತಿ ಸಂಸ್ಥೆಗಳಿಗೆ ಕೇಂದ್ರ ಗೃಹ ಸಚಿವರ ಟ್ರೋಫಿ ಮತ್ತು ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ :

ಪೊಲೀಸ್‌ ತರಬೇತಿ ಸಂಸ್ಥೆಗಳಲ್ಲಿ ತರಬೇತುದಾರರ ಅತ್ಯುತ್ತಮ ಸೇವೆ ಮತ್ತು ದೇಶದ ಪೊಲೀಸ್‌  ತರಬೇತಿಗೆ ಸಂಬಂಧಿಸಿದ ಕಾರ್ಯಯೋಜನೆಗಳನ್ನು ಹಾಗೂ ತರಬೇತಿ ಸಂಸ್ಥೆಯ ತರಬೇತಿ ಗುಣಮಟ್ಟವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುವುದು.

ಇತ್ತೀಚಿನ ನವೀಕರಣ​ : 25-02-2022 03:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080