ಅಭಿಪ್ರಾಯ / ಸಲಹೆಗಳು

ಸಂಚಾರ

• ವಾಹನ ಚಾಲನಾ ಪರವಾನಗಿ (ಡಿಎಲ್)

• ವಾಹನ ನೊಂದಣಿ ಪ್ರಮಾಣ ಪತ್ರ (ಆರ್ಸಿ)

• ವಾಹನ ವಿಮಾ ಪ್ರಮಾಣ ಪತ್ರ

• ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ

• ಸುರಕ್ಷತಾ ಪ್ರಮಾಣ ಪತ್ರ (ಎಫ್ಸಿ), ವಾಹನ ರಹದಾರಿ ಮತ್ತು ತೆರಿಗೆ ಪ್ರಮಾಣ ಪತ್ರ (ಸಾಗಣಿಕೆ ವಾಹನಗಳಿಗೆ)

• ಮೂಲ ದಾಖಲೆಗಳನ್ನು ಯಾವಾಗಲೂ ಇಟ್ಟುಕೊಂಡಿರತಕ್ಕದ್ದು, ಅಥವಾ ಡಿಜಿಲಾಕರ್ ಅಥವಾ ಪರಿವಾಹನ್ ಅಪ್ಲಿಕೇಷನ್ನ ಮುಖಾಂತರವೂ ಸಹ ತೋರಿಸಬಹುದು.

 
      FINES FOR FEW IMPORTANT TRAFFIC VIOLATIONS ARE GIVEN BELOW:- 
Sl No NAME OF THE OFFENCE  Fine for the First time Fine for 2nd time FINE TYPE
1 DISOBEDIENCE/ OBSTRUCTION/ REFUSAL/ FALSE INFORMATION 1000 1000 SPOT FINE
2 FREE WHEELING 5000 5000 SPOT FINE
3 JUMPING TR.SIGNAL 500 1000 SPOT FINE
4 MISBEHAVIOUR WITH POLICE OFFICER 2000 2000 SPOT FINE
5 NO ENTRY 500 1000 SPOT FINE
6 NO PARKING 1000 1000 SPOT FINE
7 NOT WEARING HELMET-PILLION RIDER 500 500 SPOT FINE
8 NOT WEARING A SEAT BELT 500 500 SPOT FINE
9 OVER SPEEDING  2W / 3 WHEELER & LMV 1000 1000 SPOT FINE
10 OVER SPEEDING  LGV/HGV  & OTHERS 2000 2000 SPOT FINE
11 RIDING ON FOOTPATH 500 1000 SPOT FINE
12 RIDING WITHOUT HELMET 500 500 SPOT FINE
13 TRIPPLE RIDING 500 500 SPOT FINE
14 WITHOUT D.L LMV 2000 2000 SPOT FINE
15 WITHOUT D.L OTHERS 5000 5000 SPOT FINE
16 WITHOUT D.L THREE-WHEELERS 1000 1000 SPOT FINE
17 WITHOUT D.L TWO-WHEELERS 1000 1000 SPOT FINE
18 WITHOUT INSURANCE LGV & OTHERS 4000 4000 SPOT FINE
19 WITHOUT INSURANCE LMV 2000 2000 SPOT FINE
20 WITHOUT INSURANCE TWO-WHEELERS 1000 1000 SPOT FINE
21 WRONG PARKING 1000 1000 SPOT FINE
22 DRUNK AND DRIVE 0 0 COURT FINE

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಹಾಗೂ ಮೇಲ್ದರ್ಜೆಯ ಅಧಿಕಾರಿಗಳು ಸಂಚಾರ ನಿಯಮ ಉಲ್ಲಂಘನೆಗಳಿಗೆ ಸ್ಥಳ ದಂಡ ವಿಧಿಸಬಹುದಾದ ಅಧಿಕಾರ ಹೊಂದಿರುತ್ತಾರೆ.

ವಾಹನ ಸವಾರಿ/ಚಾಲನೆ ಮಾಡುವ ಸಮಯದಲ್ಲಿ ಯಾವುದೇ ಮೊಬೈಲ್ ಫೋನ್ ಮತ್ತು ಹ್ಯಾಂಡ್ಸ್ ಫ್ರೀ ಡಿವೈಸ್ ಗಳಾದ ಇಯರ್ ಫೋನ್, ಬ್ಲೂಟೂತ್ ಹೆಡ್ ಸೆಟ್ ಇತ್ಯಾದಿಗಳನ್ನು ಉಪಯೋಗಿಸುವುದು ಅಪರಾಧವಾಗಿರುತ್ತದೆ. ಕೇವಲ ಪಥದರ್ಶಕ ಉದ್ದೇಶಕ್ಕಾಗಿ ಮೊಬೈಲ್ ಫೋನನ್ನು ಬಳಸಬಹುದಾಗಿರುತ್ತದೆ.

ವಾಹನವು ಅಪಘಾತಕ್ಕೀಡಾದಾಗ ಅದರ ಚಾಲಕನು ಗಾಯಗೊಂಡಿಲ್ಲದ ಪಕ್ಷದಲ್ಲಿ ತುರ್ತಾಗಿ ಗಾಯಗೊಂಡ ಸವಾರರಿಗೆ ಚಿಕಿತ್ಸೆ ಕೊಡಿಸುವುದು, ಪೊಲೀಸರಿಗೆ ದೂರು ನೀಡುವುದು ಮುಖ್ಯವಾದ ಕರ್ತವ್ಯಗಳಾಗಿರುತ್ತವೆ. ಒಂದು ವೇಳೆ ವಾಹನವು ಅಪಾಯಕಾರಿ ವಸ್ತುಗಳ ಸಾಗಾಣಿಕೆ ವಾಹನವಾಗಿದ್ದಲ್ಲಿ ಸಾರ್ವಜನಿಕರನ್ನು ಅದರಿಂದ ದೂರವಿರಿಸುವುದು ಹಾಗೂ ಅದರ ಸುತ್ತಮುತ್ತ ಯಾರೂ ಬೆಂಕಿ ಹಚ್ಚುವುದನ್ನು ಮಾಡದಂತೆ ನಿರ್ಬಂಧಿಸುವುದು ಮತ್ತು ವಾಹನಗಳಲ್ಲಿ ತೋರಿಸಿರುವಂತೆ ತುರ್ತು ಸಂದರ್ಭಗಳಲ್ಲಿ ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು.

ವಾಹನಗಳನ್ನು ಚಾಲಕರು ರಸ್ತೆಗಳಲ್ಲಿ ಬಿಟ್ಟು ಹೋಗಿದ್ದ ಪಕ್ಷದಲ್ಲಿ ಹಾಗೂ ನಿರ್ಭಂದಿತ ವಲಯಗಳಲ್ಲಿ ಅಥವಾ ವಾಹನ ನಿಲ್ಲಿಸಬಾರದ ಸ್ಥಳವೆಂದು ನಿಗಧಿಪಡಿಸಲಾದ ಸ್ಥಳಗಳಲ್ಲಿ ರಸ್ತೆಯ ಉಪಯೋಗ ಮಾಡುವ ಜನರಿಗೆ ವಾಹನ ಹಾಗೂ ಸಂಚಾರಕ್ಕೆ ತೊಂದರೆ ಉಂಟಾಗುವಂತೆ ವಾಹನ ನಿಲ್ಲಿಸಿದ್ದಲ್ಲಿ ವಾಹನಗಳನ್ನು ಟೋವ್ ಮಾಡಲಾಗುವುದು.

ಈ ಕೆಳಕಂಡ ಸಂದರ್ಭಗಳಲ್ಲಿ ಪೊಲೀಸರು ವಾಹನಗಳನ್ನು ತಮ್ಮ ವಶಕ್ಕೆ ಪಡೆಯಬಹುದು.

• ಯಾವುದೇ ವ್ಯಕ್ತಿಯು ಸೂಕ್ತ ವಾಹನ ಚಾಲನಾ ಪರವಾನಗಿ ಹೊಂದಿಲ್ಲದೇ, ವಾಹನ ಚಾಲನೆ ಮಾಡಿದಾಗ

• ವಾಹನದ ನೊಂದಣಿ ಪ್ರಮಾಣಪತ್ರ ಇಲ್ಲದೇ ವಾಹನ ಚಾಲನೆ ಮಾಡಿದಾಗ

• ಸಾರಿಗೆ ವಾಹನವನ್ನು ರಹದಾರಿ ಪತ್ರವನ್ನು ಹೊಂದಿಲ್ಲದೇ ಅಥವಾ ರಹದಾರಿಯನ್ನು ಉಲ್ಲಂಘನೆ ಮಾಡಿ ಚಾಲನೆ ಮಾಡಿದಾಗ

• ವಾಹನ ಚಾಲಕ/ಸವಾರ ಮದ್ಯ ಸೇವನೆ ಮಾಡಿ, ವಾಹನ ಚಾಲನೆ/ಸವಾರಿ ಮಾಡಿದಾಗ

• ಅಪರಾಧ ಪ್ರಕರಣಗಳಲ್ಲಿ ಉಪಯೋಗಿಸಿದ ವಾಹನವನ್ನು ಚಾಲನೆ ಮಾಡಿದ ಪಕ್ಷದಲ್ಲಿ

ಯಾವುದೇ ಪೊಲೀಸ್ ಅಧಿಕಾರಿ ಹೊರರಾಜ್ಯದಲ್ಲಿ ನೊಂದಣಿಯಾದ ವಾಹನಗಳಿಗೆ, ಬೇರೆ ರಾಜ್ಯದಲ್ಲಿ ನೊಂದಣಿಯಾದ ವಾಹನವೆಂಬ ಕಾರಣ ನೀಡಿ ದಂಡ ವಿಧಿಸಲು ಸಾಧ್ಯವಿಲ್ಲ.

ವಾಹನ ಚಾಲಕರು ಅಥವಾ ಸವಾರರು ಸ್ಥಳದಂಡ ಪಾವತಿ ಮಾಡಲು ನಿರಾಕರಿಸಿದಲ್ಲಿ, ಹಾಜರಿದ್ದ ಅಧಿಕಾರಿಯ ಬಳಿ ತಮ್ಮ ಮೂಲ ವಾಹನ ಚಾಲನಾ ಪರವಾನಗಿಯನ್ನು ಹಾಜರು ಪಡಿಸಿ, ಅದಕ್ಕೆ ಹಿಂಬರಹವನ್ನು ಪಡೆದುಕೊಳ್ಳುವುದು. ನಂತರ ಒಂದು ವಾರದೊಳಗಾಗಿ ಪೊಲೀಸ್ ಠಾಣೆಗೆ ಹೋಗಿ ದಂಡ ಪಾವತಿ ಮಾಡಿ ವಾಹನ ಚಾಲನೆ ಪರವಾನಗಿಯನ್ನು ಪಡೆದುಕೊಳ್ಳಬಹುದು ಅಥವಾ ನ್ಯಾಯಾಲಯಕ್ಕೆ ಹಾಜರಾಗಿ ದಂಡ ಪಾವತಿ ಮಾಡಬಹುದು. .

ದಂಡ ವಿಧಿಸುವ ಅಧಿಕಾರಿಯ ಬಳಿ ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್ ಉಪಕರಣ (ಪಿಡಿಎ) ಇರುವುದರಿಂದ ನೀವು ಪಾವತಿಸಿದ ದಂಡದ ಮೊತ್ತಕ್ಕೆ ಸರಿಯಾದ ರಸೀದಿಯನ್ನು ಪಡೆದುಕೊಳ್ಳುವ ಮೂಲಕ ನೀವು ಹೆಚ್ಚು ದಂಡ ಪಾವತಿ ಮಾಡಿರುವುದಿಲ್ಲ ಎಂದು ಖಚಿತ ಪಡಿಸಿಕೊಳ್ಳಬಹುದು.

ದಂಡ ಪಾವತಿ ನೋಟೀಸುಗಳನ್ನು ವಾಹನದ ನೋಂದಣಿ ಪ್ರಮಾಣ ಪತ್ರ ಹೊಂದಿರುವ ಮಾಲೀಕರ ಹೆಸರು ಮತ್ತು ವಿಳಾಸಗಳನ್ನು ರಸ್ತೆ ಸಾರಿಗೆ ಪ್ರಾಧಿಕಾರದಿಂದ ಪಡೆದು ಕಳಿಸಿಕೊಡಲಾಗುತ್ತದೆ. ಆದ್ದರಿಂದ ವಾಹನವನ್ನು ಮಾರಾಟ ಮಾಡಿದ ಕೂಡಲೇ ಮಾಲೀಕತ್ವವನ್ನು ಖರೀದಿಸಿದ ವ್ಯಕ್ತಿಯ ಹೆಸರಿಗೆ ಬದಲಾಯಿಸಿದರೇ, ಈ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.

ಇತ್ತೀಚಿನ ನವೀಕರಣ​ : 05-08-2021 11:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080